Select Your Language

Notifications

webdunia
webdunia
webdunia
webdunia

ತೂಕ ಇಳಿಸಿಕೊಳ್ಳುವವರಿಗೆ ಇಲ್ಲಿದೆ ನೋಡಿ ಓಟ್ಸ್ ಸೆಟ್ ದೋಸೆ

ತೂಕ ಇಳಿಸಿಕೊಳ್ಳುವವರಿಗೆ ಇಲ್ಲಿದೆ ನೋಡಿ ಓಟ್ಸ್ ಸೆಟ್ ದೋಸೆ
ಬೆಂಗಳೂರು , ಭಾನುವಾರ, 23 ಆಗಸ್ಟ್ 2020 (11:32 IST)
ಬೆಂಗಳೂರು :ಓಟ್ಸ್ ನ್ನು ಹಲವು ಬಗೆಯ ತಿಂಡಿಗಳನ್ನು ಮಾಡಲು ಬಳಸುತ್ತಾರೆ. ಇದರಿಂದಸೆಟ್ ದೋಸೆಯನ್ನು ಕೂಡ ಮಾಡಬಹುದು. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಬೇಕಾಗುವ ಸಾಮಾಗ್ರಿಗಳು : ¼ ಕಪ್ ಉದ್ದಿನ ಬೇಳೆ, 2 ಚಮಚ ಮೆಂತ್ಯಕಾಳು, 1 ಚಮಚ ಕಡಲೆಬೇಳೆ, 1 ಕಪ್ ಓಟ್ಸ್, 3 ಚಮಚ ಅವಲಕ್ಕಿ, ಉಪ್ಪು.

ಮಾಡುವ ವಿಧಾನ : ಉದ್ದಿನ ಬೇಳೆ, ಮೆಂತ್ಯಕಾಳು, ಕಡಲೆಬೇಳೆಗಳನ್ನು ನೀರಿನಲ್ಲಿ 4 ಗಂಟೆಗಳ ಕಾಲ ನೆನೆಸಿಡಿ. ಹಾಗೇ ಅವಲಕ್ಕಿ ಮತ್ತು ಓಟ್ಸ್ ನ್ನು ಕೂಡ 4 ಗಂಟೆಗಳ ಕಾಲ ನೆನೆಸಿಡಿ. ಬಳಿಕ ನೆನೆಸಿದ ಕಾಳುಗಳ ನೀರನ್ನು ತೆಗೆದು ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಹಾಗೇ ಓಟ್ಸ್ ಮತ್ತು ಅವಲಕ್ಕಿಯನ್ನು ರುಬ್ಬಿ ಪೇಸ್ಟ್ ಮಾಡಕೊಳ್ಳಿ. ಈ ಎರಡು ಪೇಸ್ಟ್ ಗಳನ್ನು ಮಿಕ್ಸ್ ಮಾಡಿ. ನೀರು ಮತ್ತು ಉಪ್ಪನ್ನು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಮಿಕ್ಸ್ ಮಾಡಿ 8 ಗಂಟೆಗಳ ಕಾಲ ಹಾಗೆ ಇಟ್ಟು  ಬಳಿಕ ಕಾದ ತವಾ ಮೇಲೆ ದೋಸೆಯನ್ನು ತಯಾರಿಸಿದರೆ ಓಟ್ಸ್ ಸೆಟ್ ದೋಸೆ ರೆಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಗ್ಲಾಸ್ ಸ್ಕೀನ್ ಪಡೆಯಲು ಈ ಫೇಸ್ ಪ್ಯಾಕ್ ಬಳಸಿ