ಮಂಡಕ್ಕಿ ಚಿತ್ರಾನ್ನ

Webdunia
ಶುಕ್ರವಾರ, 14 ಸೆಪ್ಟಂಬರ್ 2018 (13:56 IST)
ದಿನಾ ಮುಂಜಾನೆ ಒಂದೇ ರೀತಿಯ ಉಪಹಾರ ಮಾಡಿ ಬೇಸರವಾಗಿದ್ಯಾ, ಕಡಿಮೆ ಸಮಯದಲ್ಲಿ ರುಚಿ ರುಚಿಯಾದ ಬ್ರೇಕ್‌ಫಾಸ್ಟ್ ಮಾಡಿ ಸವಿಯಬೇಕು ಎನಿಸಿದರೆ ಮಂಡಕ್ಕಿ ಚಿತ್ರಾನ್ ಉತ್ತಮ ಆಯ್ಕೆ ಎನ್ನಬಹುದು ಇದು ತಿನ್ನಲು ತುಂಬಾ ರುಚಿಯಾಗಿದ್ದು ಸಂಜೆ ಚಹ ಸೇವನೆಯ ಸಮಯದಲ್ಲೂ ಇದು ಉತ್ತಮ ಕಾಂಬಿನೇಶ್ ಎಂದರೆ ತಪ್ಪಾಗಲಾರದು
ಬೇಕಾಗುವ ಸಾಮಗ್ರಿಗಳು:
 
ಮಂಡಕ್ಕಿ – 2 ದೊಡ್ಡ ಲೋಟ (2 ಪಾವು)
ಈರುಳ್ಳಿ – 2
ಟೊಮೊಟೊ – 1 (ದೊಡ್ಡ ಗಾತ್ರದ್ದು)
ಹಸಿಮೆಣಸು – 4-5
ಜೀರಿಗೆ – 1/4 ಚಮಚ
ಶೇಂಗಾ ಬೀಜ – 3 ಚಮಚ
ಸಾಸಿವೆ – 1/4 ಚಮಚ
ಲಿಂಬೆಹಣ್ಣು – 1/2
ಕರಿಬೇವು – 8-10 ಎಸಳು
 
ಮಾಡುವ ಬಗೆ:
 
ಒಂದು ಬಾಣಲೆಗೆ 3-4 ಚಮಚದಷ್ಟು ಎಣ್ಣೆಯನ್ನು ಹಾಕಿ ಅದು ಕಾದ ನಂತರ ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವು, ಶೇಂಗಾಬೀಜ, ಹಸಿಮೆಣಸು ಹಾಗೂ ಈರುಳ್ಳಿ ಹಾಕಿ ಹದವಾಗಿ ಬಾಡಿಸಿಕೊಳ್ಳಿ. ನಂತರ ಅದಕ್ಕೆ ಟೊಮೊಟೊ, ಸ್ವಲ್ಪ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬಾಡಿಸಿ, ತದನಂತರ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಮಂಡಕ್ಕಿಯನ್ನು ಅದ್ದಿ ತಕ್ಶಣ ತೆಗೆದು ಅದಕ್ಕೆ ಮೊದಲೇ ತಯಾರಿಸಿಕೊಂಡಿರುವ ವಿಶ್ರಣವನ್ನು ಹಾಕಿ ಒಗ್ಗರಣೆಗೆ ಹಾಕಿ, ನಿಂಬೆಹಣ್ಣನ್ನು ಹಿಂಡಿ ಚೆನ್ನಾಗಿ ಕಲಸಿದರೆ ಮಂಡಕ್ಕಿ ಚಿತ್ರಾನ್ನ ಸವಿಯಲು ಸಿದ್ದ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಲಗುವ ಮುನ್ನ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ನಿಲ್ಲಿಸಿ, ಪರಿಣಾಮ ನೋಡಿ

ನಮ್ಮ ಸುತ್ತಾಮುತ್ತಾ ಸಿಗುವ ಒಂದೆಲಗದಿಂದ ಆರೋಗ್ಯಕ್ಕೆ ಸಿಗುವ ಲಕ್ಷಣಗಳೇಣು ಗೊತ್ತಾ

ಲೋ ಶುಗರ್ ಇದ್ದಾಗ ಚಾಕಲೇಟ್ ಸೇವಿಸಬಹುದೇ

ಹೆಚ್ಚುತ್ತಿರುವ ಬಿಸಿಲ ಬೇಗೆ, ಆರೋಗ್ಯದ ಮೇಲಿರಲಿ ಹೆಚ್ಚಿನ ಕಾಳಜಿ

ಮುಖದಲ್ಲಿ ಮೊಡವೆ ಬರಬಾರದು ಎಂದಿದ್ದರೆ ಇಂಥಾ ಆಹಾರ ಸೇವಿಸಬೇಡಿ video

ಮುಂದಿನ ಸುದ್ದಿ
Show comments