Select Your Language

Notifications

webdunia
webdunia
webdunia
webdunia

ಟೀ-ಕಾಫಿ ಸೇವಿಸುವ ಮೊದಲು ನೀರು ಕುಡಿಯಬೇಕು! ಯಾಕೆ ಗೊತ್ತಾ?

ಟೀ-ಕಾಫಿ ಸೇವಿಸುವ ಮೊದಲು ನೀರು ಕುಡಿಯಬೇಕು! ಯಾಕೆ ಗೊತ್ತಾ?
ಬೆಂಗಳೂರು , ಶುಕ್ರವಾರ, 14 ಸೆಪ್ಟಂಬರ್ 2018 (09:16 IST)
ಬೆಂಗಳೂರು: ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇದನ್ನು ಸೇವಿಸುವ ಮೊದಲು ನೀರು ಕುಡಿದರೆ ಆಗುವ ಪ್ರಯೋಜನ ಇನ್ನೂ ಜಾಸ್ತಿ.
 

ಹಲ್ಲು ಕೊಳೆಯಾಗಲ್ಲ
ಕಡು ಬಣ್ಣದ ಕಾಫಿ, ಟೀ ಕುಡಿಯುವುದರಿಂದ ಬಿಳಿ ಹಲ್ಲು ಹಳದಿಗಟ್ಟುವ ಸಾಧ್ಯತೆಯಿದೆ. ಹೀಗಾಗಿ ಮೊದಲು ನೀರು ಕುಡಿದು ಬಳಿಕ ಕಾಫಿ-ಟೀ ಕುಡಿದರೆ ಈ ಸಮಸ್ಯೆಯಿರದು.

ಅಸಿಡಿಟಿ
ಏನೇ ಸೇವಿಸುವ ಮೊದಲು ನೀರು ಕುಡಿದರೆ ಅಸಿಡಿಟಿ ಸಮಸ್ಯೆ ಬರದು. ಕಾಫಿ ಅಥವಾ ಟೀ ಸೇವನೆ ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ತರಬಹುದು. ಇಂತಹ ಸಮಯದಲ್ಲಿ ಮೊದಲು ನೀರು ಕುಡಿದು ನಂತರ ಕಾಫಿ ಟೀ ಸೇವಿಸಿದರೆ ಸಮಸ್ಯೆಯಾಗದು.

ಹೊಟ್ಟೆ ಹುಣ್ಣು
ಕೆಲವರಿಗೆ ಕಾಫಿ/ಟೀ ಸೇವನೆ ಹೊಟ್ಟೆ ಹುಣ್ಣಿನಂತಹ ಸಮಸ್ಯೆ ತರುತ್ತದೆ. ಇಂತಹವರು ಮೊದಲು ನೀರು ಕುಡಿದು ನಂತರ ಕಾಫಿ/ಟೀ ಸೇವಿಸಬಹುದು.

ಅಡ್ಡ ಪರಿಣಾಮ ಕಡಿಮೆ
ಕಾಫಿ/ಟೀ ಸೇವನೆ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. ಹಾಗಿದ್ದರೂ ನಮಗೆ ಚಟವಾಗಿಬಿಟ್ಟಿರುತ್ತದೆ. ಇಂತಹ ಸಂದರ್ಭದಲ್ಲಿ ಮೊದಲು ನೀರು ಕುಡಿದು ನಂತರ ಇಂತಹ ಪಾನೀಯ ಸೇವಿಸುವುದರಿಂದ ಅಡ್ಡ ಪರಿಣಾಮಗಳು ಕೊಂಚ ಕಡಿಮೆಯಾಗುತ್ತವೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಿಣಿಯರು ಸೇವಿಸಲೇಬೇಕಾದ ಮೂರು ಪಾನೀಯಗಳು