Webdunia - Bharat's app for daily news and videos

Install App

ಮಲೆನಾಡು ಪನ್ನೀರ್ ಮಂಚೂರಿ

Webdunia
ಮಂಗಳವಾರ, 28 ಆಗಸ್ಟ್ 2018 (13:59 IST)
ಬೇಕಾಗುವ ಸಾಮಗ್ರಿಗಳು:
1. ಪನ್ನೀರು
2. ಈರುಳ್ಳಿ ಸೊಪ್ಪು
3. ಬೆಳ್ಳುಳ್ಳಿ
4. ಮೆಣಸಿನಪುಡಿ
5. ಉಪ್ಪು
6. ಜೋಳದ ಪುಡಿ (ಕಾರ್ನಪ್ಲೋರ್)
7. ಕೊತ್ತಂಬರಿ ಸೊಪ್ಪು
8. ಮೈದಾಹಿಟ್ಟು
9. 2 ಚಮಚ ಗೋಧಿಹಿಟ್ಟು
10. ಚಿಲ್ಲಿ ಸಾಸ್
11. ಟೊಮೆಟೊ ಸಾಸ್ (ಹಾಟ್ ಹಾಗೂ ಸ್ವೀಟ್)
12. ಪೆಪ್ಪರ್‌ ಪುಡಿ (ಕಾಳುಮೆಣಸಿನ ಪುಡಿ)
13. ಕ್ಯಾಪ್ಸಿಕಮ್ (ದೊಡ್ಡಮೆಣಸಿನಕಾಯಿ)
ಮಾಡುವ ಬಗೆ:
ಪನ್ನೀರನ್ನು ಚೌಕಾಕಾದದಲ್ಲಿ ಸಾಮಾನ್ಯ ಗಾತ್ರದಲ್ಲಿ ಕತ್ತರಿಸಿಟ್ಟುಕೊಳ್ಳಬೇಕು ನಂತರ ಒಂದು ಪಾತ್ರೆಯನ್ನು ತೆಗೆದುಕೊಂಡು ಮೈದಾಹಿಟ್ಟು, ಜೋಳದ ಪುಡಿ, ಗೋದಿಹಿಟ್ಟು, ಮೆಣಸಿನಪುಡಿ, ಉಪ್ಪು ಹಾಕಿ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಒಂದು ಬಾಣೆಲೆಗೆ ಎಣ್ಣೆ ಹಾಕಿ ಚೆನ್ನಾಗಿ ಕಾಯಿಸಿ ನಂತರ ಕಲಿಸಿದ ಪನ್ನೀರನ್ನು ಎಣ್ಣೆಯಿಂದ ಹುರಿಯಿರಿ. ಚೆನ್ನಾಗಿ ಹುರಿದ ನಂತರ ಅದನ್ನು ಒಂದೆಡೆಯಲ್ಲಿ ಎತ್ತಿಟ್ಟುಕೊಳ್ಳಿ. ಇನ್ನೊಂದು ಬಾಣೆಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ ಸೊಪ್ಪು, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ ಮತ್ತು ಕತ್ತರಿಸಿದ ಕ್ಯಾಪ್ಸಿಕಮ್ ಹಾಕಿ ಚೆನ್ನಾಗಿ ಹುರಿಯಿರಿ ಅದಕ್ಕೆ ಪೆಪ್ಪರ್‌ ಪುಡಿ, ಖಾರ ಬೇಕಿದ್ದಲ್ಲಿ ಸ್ವಲ್ಪ ಖಾದರ ಪುಡಿ, ಚಿಲ್ಲಿ ಸಾಸ್, ಟೊಮೆಟೊ ಸಾಸ್ ಹಾಕಿ ಕಲಸಿ ಹೀಗೆ ಕಲಸುವಾಗ ಉರಿಯು ಸಣ್ಣದಾಗಿರಲಿ. ತಯಾರಿಸಿದ ಪನ್ನೀರ್ ಮಂಚೂರಿಯನ್ನು ತಟ್ಟೆಗೆ ಹಾಕಿ ಕೊತ್ತಂಬರಿ ಸೊಪ್ಪನ್ನು ಮೇಲೆಡೆಯಿಂದ ಉದುರಿಸಿ, ಬೇಕಾದರೆ ಕಡ್ಡಿ ಚುಚ್ಚಿ ಫೋರ್ಕ್‌ ಇಟ್ಟು ತಿನ್ನಲು ನೀಡಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments