Publish Date: Wed, 22 Aug 2018 (16:47 IST)
Updated Date: Wed, 22 Aug 2018 (16:51 IST)
ಬೇಕಾಗುವ ಸಾಮಗ್ರಿಗಳು:
ಕುರಿಮಾಂಸ- ಅರ್ಧ ಕೇಜಿ (ಚಿಕ್ಕ ತುಂಡುಗಳನ್ನಾಗಿಸಿ, ಚೆನ್ನಾಗಿ ತೊಳೆದು ನೀರು ಬಸಿದಿರುವುದು)
ಎಣ್ಣೆ ಅಗತ್ಯಕ್ಕೆ ತಕ್ಕಂತೆ
ಕೆಂಪು ಮೆಣಸಿನ ಪುಡಿ - 2 ಚಿಕ್ಕ ಚಮಚ
ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ - ಒಂದು ಚಿಕ್ಕ ಚಮಚ
ಹಸಿಮೆಣಸು - 4
ಹೆಚ್ಚಿದ ಈರುಳ್ಳಿ - 1 ಕಪ್
ಸಾಸಿವೆ - 1/4 ಚಮಚ
ಚಕ್ಕೆ, ವವಂಗ, ಏಲಕ್ಕಿ - 2 ಚಮಚ
ಕರಿಬೇವಿನ ಎಲೆ ಸ್ವಲ್ಪ
ಧನಿಯಾ ಪುಡಿ - 1/2 ಚಮಚ
ಮೊಸರು - 1/3 ಕಪ್
ಟೊಮೆಟೊ ರಸ - 1/4 ಕಪ್
1/2 ಚಮಚ ಜೀರಿಗೆ ಪುಡಿ
ಅರಿಶಿನ - 1/2 ಚಮಚ
ಬಡೆಸೊಪ್ಪು - 1/2 ಚಮಚ
ಉಪ್ಪು
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
* ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಕುರಿಮಾಂಸ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಬಡೆಸೊಪ್ಪು, ಮೊಸರು, ಅರಿಶಿನ, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ, 1/2 ಲೀಟರ್ ನೀರು ಸೇರಿಸಿ, ಮಿಶ್ರಣ ಮಾಡಿ ಮುಚ್ಚಿಟ್ಟು 1 ತಾಸು ಚೆನ್ನಾಗಿ ಬೇಯಿಸಿ.
* ಬೇರೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಸಾಸಿವೆ ಹಾಕಿ ಹುರಿದು, ನಂತರ ಚಕ್ಕೆ, ವವಂಗ, ಏಲಕ್ಕಿಯನ್ನು ಹಾಕಿ ಹುರಿಯಿರಿ. ನಂತರ ಈರುಳ್ಳಿ, ಹಸಿಮೆಣಸು, ಕರಿಬೇವಿನ ಎಲೆಗಳನ್ನು ಹಾಕಿ ಹುರಿಯಿರಿ. ನಂತರ ಟೊಮೆಟೊ ರಸ ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ ಹಾಕಿ ಮಿಶ್ರಣ ಮಾಡಿ, ನಂತರ ಇದಕ್ಕೆ ಬೆಂದ ಕುರಿಮಾಂಸ, ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಿಸಿ ಬಿಸಿ ಅನ್ನ ಅಥವಾ ಚಪಾತಿ ಜೊತೆ ಸೇವಿಸಿ.