1. ಹಲಸಿನ ಹಣ್ಣು
ಬೇಕಾಗುವ ಸಾಮಗ್ರಿಗಳು:
4 ಕಪ್ - ಹಲಸಿನ ಹಣ್ಣಿನ ಚೂರು
2 ಕಪ್ - ಬೆಲ್ಲ
ಮಾಡುವ ವಿಧಾನ:
* ಬಾಣಲೆಗೆ ಚೂರು ಮಾಡಿದ ಹಲಸಿನ ಹಣ್ಣುಗಳನ್ನು ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ.
* ಹಲಸಿನ ಹಣ್ಣು ಬೆಂದು ಪರಿಮಳ ಬಂದನಂತರ ಬೆಲ್ಲ ಹಾಕಿ ತಳ ಹತ್ತದಂತೆ ಕೆದಕುತ್ತಿರಿ.
* ಜಾಮ್ ಪಾಕ ಬಂದನಂತರ ತುಪ್ಪ ಹಾಕಿ. ಗಾಳಿಯಾಡದ ಡಬ್ಬದಲ್ಲಿ ಹಾಕಿರಿಸಿ.
2. ಅನಾನಸ್ ಜಾಮ್
ಬೇಕಾಗುವ ಸಾಮಗ್ರಿಗಳು:
1 - ಚೂರು ಮಾಡಿದ ಅನಾನಸ್ ಹಣ್ಣು
2 ಕಪ್ - ಸಕ್ಕರೆ
1 ಚಮಚ - ಕಲರ್
1 ಚಮಚ - ನಿಂಬೆ ರಸ.
ಮಾಡುವ ವಿಧಾನ:
* ಅನಾನಸ್ ತುಂಡುಗಳನ್ನು ಅರ್ಧ ಕಪ್ ನೀರಿನ ಜೊತೆ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ.
* ಈ ಮಿಶ್ರಣವನ್ನು ಪ್ಯಾನ್‌ಗೆ ಹಾಕಿ ಬಿಸಿ ಮಾಡಿ.
* 10 ನಿಮಿಷದ ನಂತ್ರ ಸಕ್ಕರೆ, ನಿಂಬೆ ರಸ ಹಾಗೂ ಹಳದಿ ಬಣ್ಣವನ್ನು ಹಾಕಿ ಮಿಶ್ರಣ ದಪ್ಪಗಾಗುವವರೆಗೂ ತಳ ಹತ್ತದಂತೆ ಕೆದಕುತ್ತಿರಿ.
* ಗಾಳಿಯಾಡದ ಡಬ್ಬದಲ್ಲಿ ಹಾಕಿರಿಸಿ.