Select Your Language

Notifications

webdunia
webdunia
webdunia
webdunia

ವೆಜಿಟೇಬಲ್ ಪಪ್ಸ್‌ನ್ನು ಮನೆಯಲ್ಲೇ ಮಾಡಬಹುದು ಗೊತ್ತಾ?

ವೆಜಿಟೇಬಲ್ ಪಪ್ಸ್‌ನ್ನು ಮನೆಯಲ್ಲೇ ಮಾಡಬಹುದು ಗೊತ್ತಾ?
ಬೆಂಗಳೂರು , ಮಂಗಳವಾರ, 25 ಸೆಪ್ಟಂಬರ್ 2018 (18:23 IST)
ಇಳಿಸಂಜೆಯ ಸಮಯದಲ್ಲಿ, ಊಟದ ಜೊತೆಗೆ, ಬಿಡುವಾದಾಗ ಹೀಗೆ ನಾವು ದಿನನಿತ್ಯ ನಾವು ಚಾಟ್ಸ್‌ಗಳನ್ನು ತಿನ್ನುತ್ತಲೇ ಇರುತ್ತೇವೆ. ಅದು ದಾರಿಯ ಮಧ್ಯದಲ್ಲಿ, ಆಫೀಸಿನಿಂದ ಮನೆಗೆ ಹಿಂದಿರುವಾಗ, ಶಾಲೆಯಿಂದ ಮರಳುವಾಗ ಆದರೂ ಆಗಬಹುದು. ಅದರಲ್ಲಿಯೂ ಚಿಕ್ಕ ಮಕ್ಕಳಿಗೆ ಇಂತಹ ತಿಂಡಿಗಳೆಂದರೆ ಪಂಚಪ್ರಾಣ.

ಅದರೆ ಹೊರಗಿನ ತಿಂಡಿ ಎಂದಿಗೂ ಹೊರಗಿನ ತಿಂಡಿಯೇ. ಶುಚಿತ್ವದ ವಿಷಯದಲ್ಲಿ ಎಂದಿಗೂ ಅದು ಮನೆಯಲ್ಲಿ ತಯಾರಿಸುವ ತಿಂಡಿಗಳಿಗೆ ಸರಿಸಮಾನವಾಗಲಾರದು. ಅದ್ದರಿಂದ ನಾವು ಇಂತಹ ಚಾಟ್ಸ್‌ಗಳನ್ನು ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಹೇಗೆ ಅಂತ ಕೇಳ್ತೀರಾ.. ಹೇಳ್ತೀವಿ. ನೀವೂ ಟ್ರೈ ಮಾಡಿ ನೋಡಿ.
 
ಬೇಕಾಗುವ ಸಾಮಗ್ರಿಗಳು :
 
* ಆಲೂಗಡ್ಡೆ 1 ರಿಂದ 2 (ಬೇಯಿಸಿ ಸಿಪ್ಪೆ ತೆಗೆದಿರಬೇಕು)
* ಕತ್ತರಿಸಿದ ಈರುಳ್ಳಿ 1/2
* ಬೇಯಿಸಿದ ಬಟಾಣಿ 1/2 ಕಪ್
* ತುರಿದ ಕ್ಯಾರೆಟ್ 1/2 ಕಪ್
* ಕ್ಯಾಪ್ಸಿಕಮ್ 1/2 ಕಪ್
* ಗರಂ ಮಸಾಲಾ 1 ಚಮಚ
* ಸಾಸಿವೆ 1 ಚಮಚ
* ಕೆಂಪು ಮೆಣಸಿನ ಪುಡಿ 1 ಚಮಚ
* ಪಫ್ ಶೀಟ್ (ಅಂಗಡಿಗಳಲ್ಲಿ ಸಿಗುತ್ತದೆ)
 
ಮಾಡುವ ವಿಧಾನ : 
 
 ಮೊದಲು ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ ಅದರಲ್ಲಿ ಸಾಸಿವೆಯನ್ನು ಹಾಕಿ ಈರುಳ್ಳಿ, ಕ್ಯಾಪ್ಸಿಕಮ್ ಮತ್ತು ಕ್ಯಾರೆಟ್ ಅನ್ನು ಹುರಿದುಕೊಳ್ಳಬೇಕು. ನಂತರ ಬಟಾಣಿ, ಆಲೂಗಡ್ಡೆಯನ್ನು ಬೆರೆಸಿ ಗರಂ ಮಸಾಲಾ, ಕೆಂಪು ಮೆಣಸಿನ ಪುಡಿಯನ್ನು ಹಾಕಿ 10 ನಿಮಿಷ ಚೆನ್ನಾಗಿ ತಿರುಗಿಸಬೇಕು. ಅದನ್ನು ತಣ್ಣಗಾಗಲು ಬಿಡಬೇಕು. ನಂತರ ಪಫ್ ಶೀಟ್‌ನಲ್ಲಿ ಈ ಪಲ್ಯದ ಮಿಶ್ರಣವನ್ನು ಸೇರಿಸಿ ಮುಚ್ಚಬೇಕು. ನಂತರ ಓವೆನ್‌ನಲ್ಲಿ 40 ನಿಮಿಷ ಇದನ್ನು ಬೇಯಿಸಿದರೆ ವೆಜಿಟೇಬಲ್ ಪಫ್ ರೆಡಿಯಾಗಿರುತ್ತದೆ. ಇದರೊಂದಿಗೆ ಚಟ್ನಿಯನ್ನು ತಯಾರಿಸಿಕೊಂಡು ತಿಂದರೆ ಇನ್ನೂ ರುಚಿಯಾಗಿರುತ್ತದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಎಲೆಕೋಸಿನ ಆರೋಗ್ಯ ಪ್ರಯೋಜನಗಳು