Select Your Language

Notifications

webdunia
webdunia
webdunia
webdunia

ಜೋಳದ ಖಡಕ್ ರೊಟ್ಟಿ, ಸಖತ್ ಫೇಮಸ್ ಆಗ್ತಿದೆ ಮಸಾಲ ರೊಟ್ಟಿ!

ಜೋಳದ ಖಡಕ್ ರೊಟ್ಟಿ, ಸಖತ್ ಫೇಮಸ್ ಆಗ್ತಿದೆ ಮಸಾಲ ರೊಟ್ಟಿ!
ಉತ್ತರ ಕರ್ನಾಟಕ , ಶುಕ್ರವಾರ, 1 ಅಕ್ಟೋಬರ್ 2021 (12:15 IST)
ಉತ್ತರ ಕರ್ನಾಟಕ ಮಂದಿಗೆ ಜೋಳದ ರೊಟ್ಟಿ ಇಲ್ಲ ಅಂದ್ರೆ ಊಟ ಮಾಡಿದಮತೆ ಅನಿಸುವುದಿಲ್ಲ. ಬದನೆಕಾಯಿ ಎಣ್ಣೆಗಾಯಿ, ಗುರೆಳ್ಳು ಚಟ್ನಿಪುಡಿ, ಮೂಲಂಗಿ, ಮೆಂತ್ಯೆ ಸೊಪ್ಪು, ಕ್ಯಾರೆಟ್, ಗಟ್ಟಿ ಮೊಸರು ಇವುಗಳೊಟ್ಟಿಗೆ ಜೋಳದ ರೊಟ್ಟಿ ತಿನ್ನುತ್ತಿದ್ದಾರೆ ಸ್ವರ್ಗಕ್ಕೆ ಎರಡು ಗೇಣು ಎನ್ನುವಂತಾಗುತ್ತದೆ. 

ಉತ್ತರ ಕರ್ನಾಟಕದ ಜನರು ನೀವು ಎಷ್ಟು ರೊಟ್ಟಿ ತಿಂದೆವು ಎಂಬ ಬಗ್ಗೆ ನಿಮಗೆ ಲೆಕ್ಕವೇ ಸಿಗುವುದಿಲ್ಲ ಅಷ್ಟೊಂದು ರುಚಿ ಎನ್ನುತ್ತಾರೆ. ಜೋಳದ ರೊಟ್ಟಿಯಲ್ಲಿ ಮೃದುವಾದ ಮತ್ತು ಖಡಕ್ ರೊಟ್ಟಿ ಇರುತ್ತದೆ. ಇಲ್ಲಿನ ಮಂದಿ ಮೃದು ರೊಟ್ಟಿಗಿಂತ ಖಡಕ್ ರೊಟ್ಟಿ ಇಷ್ಟಪಡುತ್ತಾರೆ.
ಇದೇ ಜೊಳದ ರೊಟ್ಟಿಗೆ ರಾಯಚೂರಿನ ಲಿಂಗಸೂಗುರು ತಾಲೂಕಿನ ವ್ಯಕ್ತಿಯೊಬ್ಬರು ಸ್ವಲ್ಪ ವಿಭಿನ್ನ ರೀತಿಯ ಸ್ಪರ್ಶ ನೀಡಿದ್ದಾರೆ. ಹೌದು ವೀರಭದ್ರಯ್ಯಸ್ವಾಮಿ ಪತ್ರಿಮಠ್ ಎಂಬ ವ್ಯಕ್ತಿಯ ಈ ಫ್ಯಾಶನೆಬಲ್ ರೊಟ್ಟಿಗೆ ಸಖತ್ ಬೇಡಿಕೆ ಇದೆ. ಮದುವೆ, ನಾಮಕಾರಣ, ಗೃಹಪ್ರವೇಶ, ಹುಟ್ಟುಹಬ್ಬ ಹೀಗೆ ಪ್ರತಿಯೊಂದು ಸಮಾರಂಭದಲ್ಲಿ ಇವರ ಈ ರೊಟ್ಟಿ ಇಲ್ಲದೆ ಸಮಾರಂಭ ಮುಕ್ತಾಯಗೊಳ್ಳುವುದೇ ಇಲ್ಲ. ಅವರ ಈ ಮಸಾಲ ರೊಟ್ಟಿ ಕೇವಲ ಉತ್ತರ ಕರ್ನಾಟಕವಲ್ಲದೇ ರಾಜ್ಯದಾದ್ಯಂತ ಪ್ರಖ್ಯಾತಿ ಪಡೆದಿದೆ.
ಲಿಂಗಸೂಗುರು ಪಟ್ಟಣದ ಹೊರವಲಯದಲ್ಲಿರುವ ತಡಕಲ್ನಲ್ಲಿ ತಂಗಿರುವ ಪತ್ರಿಮಠ ಒಂದು ವರ್ಷದ ಹಿಂದೆ 'ಮಸಾಲಾ ಪಾಪಡ್' (ರೆಸ್ಟೋರೆಂಟ್ಗಳಲ್ಲಿ ಸ್ಟಾರ್ಟರ್) ನಂತಹ ಸರಳವಾದ ಜೋಳ ರೊಟ್ಟಿ ನೀಡುವ ಪ್ರಯೋಗವನ್ನು ಮೊದಲು ಆರಂಭಿಸಿದರು ಎಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದರು.
ಪಾಪಡ್ನಂತಹ ಜೋಳದ ರೊಟ್ಟಿ ಇದೀಗ ಆರೋಗ್ಯಕ್ಕೆ ಪರ್ಯಾಯವಾಗಿರುವುದರಿಂದ, ನಾವು ಖಡಕ್ ರೊಟ್ಟಿಗಳನ್ನು ಹುರಿದು, 2-3 ದಿನಗಳ ಮೊದಲು ತಯಾರಿಸಿ ಇಡುತ್ತೇವೆ. ನಂತರ ಅದೇ ರೊಟ್ಟಿಯನ್ನು ಕತ್ತರಿಸಿದ ತರಕಾರಿಗಳು, ಚಟ್ನಿ ಪುಡಿ ಮತ್ತು ಮಸಾಲೆಯಿಂದ ಅಲಂಕರಿಸುತ್ತೇವೆ. ನಾವು ನಮ್ಮ ಅನನ್ಯ ಸ್ವಾದಭರಿತ ಈ ಪದಾರ್ಥ ಸಿದ್ಧಪಡಿಸುವ ಹೊತ್ತಿಗೆ, ಕೊರೋನಾ ರೋಗವು ಅಪ್ಪಳಿಸಿತು.
ಆದ ಕಾರಣ ನಮಗೆ ಯಾವುದೇ ಸಾಮಾಜಿಕ ಕೂಟಗಳಿಗೆ ಇವುಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಆದರೆ ನಾವು ಯಾವ ಸಮಯದಲ್ಲಿ ಆರಂಭಿಸಿದೆವೋ ಅಂದಿನಿಂದ ಮಸಾಲಾ ಜೋಳ ರೊಟ್ಟಿಗಳ ರುಚಿಗೆ ಮರುಹೋದ ಜನರು ಮಾಮೂಲಿ ಜೋಳದ ರೊಟ್ಟಿಗಳನ್ನು ಇಷ್ಟ ಪಡುವುದನ್ನು ಕಡಿಮೆ ಮಾಡಿದರು ಮತ್ತು ಗ್ರಾಹಕರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಜೋಳ ರೊಟ್ಟಿಗಳನ್ನು ತಿರಸ್ಕರಿಸುವ ಚಪಾತಿಗಳತ್ತ ಮುಖ ಮಾಡಿದವರು ಈಗ ಹೊಸ ರುಚಿಯ ರೊಟ್ಟಿಗೆ ಮರಳುತ್ತಿದ್ದಾರೆ, ”ಎಂದು ಅವರು ಹೇಳಿದರು.
ರಾಜ್ಯದ ಜನರು ಅದನ್ನು ಸೇವಿಸಲು ಕಷ್ಟಪಡುತ್ತಾರೆ. ಆದರೂ, ಹೊಸ ರುಚಿಯನ್ನು ಹೊಂದಿದ್ದು, ಗರಿಗರಿಯಾಗಿದ್ದು, ಆಕರ್ಷಕವಾಗಿದೆ. ಇಂತಹ ಪ್ರಯತ್ನಗಳು ಸ್ಥಳೀಯ ಜೋಳದ ರೋಟಿಯ ಮೌಲ್ಯವನ್ನು ಹೆಚ್ಚಿಸುತ್ತವೆ, ಎಂದು ಅವರು ಹೇಳಿದರು.
ತುಮಕೂರಿನ ಕೃಷಿ ಬರಹಗಾರ ಮಲ್ಲಿಕಾರ್ಜುನ್ ಹೊಸಪಾಳ್ಯ ಮಾತನಾಡಿ, ಇದು ರಾಜ್ಯದಾದ್ಯಂತ ರೆಸ್ಟೋರೆಂಟ್ಗಳನ್ನು ಪ್ರವೇಶಿಸಿದರೆ, ಜೋಳದ ರೊಟ್ಟಿಗಳಿಗೆ ಜನಪ್ರಿಯತೆ ಮತ್ತು ಬೇಡಿಕೆ ಹೆಚ್ಚಾಗುತ್ತದೆ ಎಂದು ಹೇಳಿದರು.
ಮಸಾಲೆ ಜೋಳದ ರೊಟ್ಟಿಗಳಿಗೆ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚು ವೆಚ್ಚವಾಗುತ್ತದೆ. "ಆದರೆ ಈ ರೊಟ್ಟಿಯೊಂದಿಗೆ ನಾವು ಎರಡು ಪಲ್ಯಗಳನ್ನು ಪೂರೈಸಬೇಕಾಗಿಲ್ಲ, ಏಕೆಂದರೆ ಎಲ್ಲಾ ರೀತಿಯ ಪದಾರ್ಥಗಳನ್ನು ಒಳಗೊಂಡು ರುಚಿಕಟ್ಟಾಗಿರುತ್ತದೆ ಎಂದು ಹೇಳಿದರು.
ಜೋಳ ಬೆಳೆಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಪತ್ರಿಮಠವನ್ನು ಮೈಸೂರು, ಬೆಂಗಳೂರು ಮತ್ತು ಇತರ ನಗರಗಳಲ್ಲಿ ಆಹಾರ ಮೇಳಗಳಿಗೆ ಆಹ್ವಾನಿಸುತ್ತೇವೆ ಎಂದು ಪ್ರಸಾದ್ ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ವರ್ಕ್ ಫ್ರಂ ಹೋಮ್ ನಿಂದ ಯುವಕರನ್ನು ಕಾಡ್ತಿದೆ ಈ ಸಮಸ್ಯೆ