Select Your Language

Notifications

webdunia
webdunia
webdunia
webdunia

ತಾಜ್ ಮಹಲ್‌ಗೆ ಭೇಟಿ ನೀಡಿದ ವಿಲ್ ಸ್ಮಿತ್..

ತಾಜ್ ಮಹಲ್‌ಗೆ ಭೇಟಿ ನೀಡಿದ ವಿಲ್ ಸ್ಮಿತ್..
ಬೆಂಗಳೂರು , ಸೋಮವಾರ, 15 ಅಕ್ಟೋಬರ್ 2018 (18:23 IST)
ಹಾಲಿವುಡ್ ನಟ ವಿಲ್ ಸ್ಮಿತ್ ಭಾರತದ ಪ್ರವಾಸದಲ್ಲಿದ್ದು ನಿನ್ನೆ ಬುಧವಾರ, ಅಕ್ಟೋಬರ್ 10 ರಂದು ಆಗ್ರಾದಲ್ಲಿರುವ ತಾಜ್ ಮಹಲ್‌ಗೆ ಭೇಟಿ ನೀಡಿದ್ದಾರೆ. ಜಗತ್ತಿನ ಏಳು ಅದ್ಭುತಗಳಲ್ಲಿ ತಾಜ್ ಮಹಲ್ ಸಹ ಒಂದಾಗಿದೆ. ಪ್ರೀತಿಯ ಸ್ಮಾರಕವಾದ ತಾಜ್ ಮಹಲ್ ಮುಂದೆ ಹಲವಾರು ಫೋಟೋಗಳನ್ನು ತೆಗೆದುಕೊಂಡಿರುವ ಸ್ಮಿತ್ ವಿವಿಧ ಭಾವ-ಭಂಗಿಗಳಲ್ಲಿ ಫೋಟೋಗಳಿಗೆ ಫೋಸ್ ನೀಡಿದ್ದಾರೆ.
ಕಳೆದ 4-5 ದಿನಗಳಿಂದ ಹಾಲಿವುಡ್‌ನ ಜನಪ್ರಿಯ ನಟ ವಿಲ್ ಸ್ಮಿತ್ ಇಂಡಿಯಾದಲ್ಲಿ ಸಮಯ ಕಳೆಯುತ್ತಿರುವುದು ನಿಮಗೆಲ್ಲಾ ತಿಳಿದೇ ಇರುತ್ತದೆ. ಅವರು ಇತ್ತೀಚೆಗೆ ಬಾಲಿವುಡ್‌ನ ಪ್ರಸಿದ್ಧ ನಟ ರಣವೀರ್ ಸಿಂಗ್ ಮತ್ತು ನಿರ್ಮಾಪಕ ಕರಣ್ ಜೋಹರ್ ಅವರೊಂದಿಗೂ ಸಹ ಸಮಯ ಕಳೆದಿದ್ದಾರೆ. ಸ್ಮಿತ್ ಇನ್ಸ್ಟಾಗ್ರಾಮ್‌ನಲ್ಲಿ ಅವರೊಂದಿಗಿನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು ಮತ್ತು ಬಾಲಿವುಡ್ ಮೂವ್‌ಗಳನ್ನು ಕಲಿಯುತ್ತಿರುವುದಾಗಿ ಹೇಳಿಕೊಂಡಿದ್ದರು. ಸ್ಮಿತ್ ಈಗ ಭಾರತದ ಹಲವು ದೇಸಿ ಅನುಭವಗಳನ್ನು ಪಡೆಯುವಲ್ಲಿ ನಿರತರಾಗಿದ್ದಾರೆ. ರಿಕ್ಷಾ ಚಾಲನೆಯಿಂದ ಹಿಡಿದು ಕೆಲವು ಭಾಂಗ್ರಾ ಮೂವ್‌ಗಳನ್ನು ಕಲಿಯುವವರೆಗೆ, ಬಾಲಿವುಡ್ ಸೆಟ್‌ನಲ್ಲಿನ ಹ್ಯಾಂಗ್‌ಔಟ್‌ನಿಂದ ಹರಿದ್ವಾರದಲ್ಲಿನ ಗಂಗಾ ಆರತಿಯಲ್ಲಿ ಭಾಗವಹಿಸುವವರೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
 
ಇದೀಗ ಸ್ಮಿತ್ ಜಗತ್ತಿನ ಏಳನೇ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್‌ಗೆ ಭೇಟಿ ನೀಡಿದ್ದು ಹಲವು ಭಂಗಿಗಳಲ್ಲಿ ಫೋಟೋಗೆ ಫೋಸ್ ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೋಗಳು ಹರಿದಾಡುತ್ತಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಧ್ರುವ ಸರ್ಜಾ ವಿರುದ್ಧ ಎಫ್ ಐಆರ್ ದಾಖಲು