Publish Date: Fri, 22 Mar 2019 (18:55 IST)
Updated Date: Fri, 22 Mar 2019 (19:00 IST)
ಬೇಕಾಗುವ ಸಾಮಗ್ರಿಗಳು:
ಮೆಂತ್ಯ 2 ಚಮಚ,
ಉದ್ದಿನಬೇಳೆ 1 ಚಮಚ
ಒಣಮೆಣಸಿನಕಾಯಿ 5-6
ಬೆಲ್ಲ ಸ್ವಲ್ಪ,
ಹುಣಸೇರಸ 2 ಚಮಚ,
ಉಪ್ಪು ರುಚಿಗೆ ತಕ್ಕಷ್ಟು
ತೆಂಗಿನತುರಿ 1 ಕಪ್
ಒಗ್ಗರಣೆಗೆ: ಕರಿಬೇವು, ಜೀರಿಗೆ, ಸಾಸಿವೆ, ಒಣಮೆಣಸಿನಕಾಯಿ.
ಮಾಡುವ ವಿಧಾನ: ಮೊದಲು ಮೆಂತ್ಯವನ್ನು ಪರಿಮಳ ಬರುವವರೆಗೆ ಹುರಿದುಕೊಳ್ಳಬೇಕು. ಆನಂತರ, ಉದ್ದಿನಬೇಳೆ, ಒಣಮೆಣಸಿನಕಾಯಿಯನ್ನು ಹುರಿದುಕೊಂಡು, ತೆಂಗಿನತುರಿಯೊಂದಿಗೆ ರುಬ್ಬಿಕೊಳ್ಳಬೇಕು. ಆನಂತರ, ಬಾಣಲೆಯಲ್ಲಿ ಹಾಕಿ, ಒಗ್ಗರಣೆ ಹಾಕಿಕೊಂಡು, ಹುಣಸೇರಸ ಮತ್ತು ಬೆಲ್ಲವನ್ನು ಹಾಕಿ, ಉಪ್ಪು ಹಾಕಿ, ಒಂದು ಕುದಿ ಬಂದ ಮೇಲೆ, ರುಬ್ಬಿದ ಮಿಶ್ರಣ ಹಾಕಿ ಕುದಿಸಿದರೆ, ರುಚಿ ರುಚಿಯಾದ ಮೆಂತ್ಯದ ಗೊಜ್ಜು ರೆಡಿ. ಇದನ್ನು ದೋಸೆ, ಚಪಾತಿಯೊಂದಿಗೆ ಸವಿಯಲು ಬಲು ರುಚಿ.