Select Your Language

Notifications

webdunia
webdunia
webdunia
webdunia

ಸ್ವಾದಿಷ್ಠ ಕ್ಯಾಪ್ಸಿಕಂ ರೈಸ್

ಸ್ವಾದಿಷ್ಠ ಕ್ಯಾಪ್ಸಿಕಂ ರೈಸ್
ಬೆಂಗಳೂರು , ಗುರುವಾರ, 21 ಮಾರ್ಚ್ 2019 (20:04 IST)
ಸಾಮಾನ್ಯವಾಗಿ ಮನೆಗಳಲ್ಲಿ ಬೆಳಗಿನ ತಿಂಡಿಗೆ ಚಿತ್ರಾನ್ನ, ಈರುಳ್ಳಿ ರೈಸ್, ಕ್ಯಾರೇಟ್ ರೈಸ್, ಟೊಮೆಟೊ ರೈಸ್ ಹೀಗೆ ತರಾವರಿ ರೈಸ್ ಐಟಂಗಳನ್ನು ಮಾಡುತ್ತಿರುತ್ತೇವೆ. ಈ ರೀತಿಯ ರೈಸ್ ಮಾಡಿದರೆ ಒಂದು ಪ್ರಯೋಜನವೆಂದರೆ ಈ ರೀತಿಯಾಗಿ ಮಾಡಿರುವ ತಿಂಡಿಗಳು ಮಧ್ಯಾಹ್ನದ ಲಂಚ್ ಬಾಕ್ಸ್ ಗೂ ತುಂಬಿಕೊಂಡು ಹೋಗಬಹುದು. ಆದರೆ ನಿಮಗೆ ಇವೆಲ್ಲಾ ತಿಂದು ಬೇಜಾರಾಗಿದ್ದಲ್ಲಿ ಕ್ಯಾಪ್ಸಿಕಂ ರೈಸ್ ಒಮ್ಮೆ ಮಾಡಿ ನೋಡಿ.
 
ಬೇಕಾಗುವ ಸಾಮಗ್ರಿಗಳು:
1 ಕಪ್ ಅಕ್ಕಿ
ಕತ್ತರಿಸಿದ 2 ದುಂಡು ಮೆಣಸಿನ ಕಾಯಿ (ಹಳದಿ, ಕೆಂಪು ಅಥವಾ ಹಸಿರು ಬಣ್ಣದು)
1 ಈರುಳ್ಳಿ (ಕತ್ತರಿಸಿದ್ದು)
3-4 ಹಸಿಮೆಣಸಿನ ಕಾಯಿ (ಕತ್ತರಿಸಿದ್ದು)
ಅರಿಶಿಣ ಪುಡಿ 1/4 ಚಮಚ
ಜೀರಿಗೆ (ಸ್ವಲ್ಪ)
ಸಾಸಿವೆ (ಸ್ವಲ್ಪ) 
ಎಣ್ಣೆ (ಸ್ವಲ್ಪ)
ಗೋಡಂಬಿ (ಅಗತ್ಯವೆನಿಸಿದರೆ)
ಸ್ವಲ್ಪ ಕೊತ್ತಂಬರಿ ಸೊಪ್ಪು
ನಿಂಬೆ ರಸ
ತುಪ್ಪ ಹಾಗೂ ರುಚಿಗೆ ತಕ್ಕಷ್ಟು ಉಪ್ಪು
 
ತಯಾರಿಸುವ ವಿಧಾನ: 
 
ಅಕ್ಕಿಯನ್ನು ಬೇಯಿಸಿಕೊಂಡು ಅನ್ನ ಮಾಡಿಕೊಳ್ಳಿ ತುಂಬಾ ಬೇಯಿಸಬೇಡಿ ಸ್ವಲ್ಪ ಹುಡಿಹುಡಿಯಾಗಿರಲಿ. ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ, ಎಣ್ಣೆ ಅಥವಾ ತುಪ್ಪ ಬಿಸಿಯಾದಾಗ ಸಾಸಿವೆ ಮತ್ತು ಜೀರಿಗೆ ಹಾಕಬೇಕು. ಅವುಗಳು ಚಟಾಪಟ ಶಬ್ದ ಮಾಡಲು ಪ್ರಾರಂಭಿಸಿದಾಗ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ತದನಂತರ ಕ್ಯಾಪ್ಸಿಕಂ ಹಾಕಿ ಸ್ವಲ್ಪ ಮೆದುವಾಗುವವರೆಗೆ ಹುರಿಯಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. 
 
ನಂತರ ಸಿದ್ಧಪಡಿಸಿದ ಮಸಾಲೆಗೆ ಅನ್ನ ಹಾಗೂ ಅರಿಶಿನದ ಜೊತೆಗೆ ಸ್ವಲ್ಪ ನಿಂಬೆರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಿಮಗೆ ಗೋಡಂಬಿ ಬೇಕು ಎನಿಸಿದರೆ ಸ್ವಲ್ಪ ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಅದನ್ನು ಕೊತ್ತೊಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ಕ್ಯಾಪ್ಸಿಕಂ ರೈಸ್ ಸಿದ್ಧವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ನವಣೆ ಬಿಸಿಬೇಳೆ ಬಾತ್