Daily Horoscope

ಸುಲಭವಾಗಿ ತಯಾರಾಗುವ ರುಚಿಕರವಾದ ಮೊಟ್ಟೆ (ಎಗ್) ಪಲ್ಯ

Webdunia
ಶನಿವಾರ, 13 ಜನವರಿ 2018 (14:51 IST)
ಬೆಂಗಳೂರು : ಮೊಟ್ಟೆಯಿಂದ ಹಲವು ಬಗೆಯ ರೆಸಿಪಿಯನ್ನು ಮಾಡಬಹುದು. ಅದು ಬಹಳ ರುಚಿಯಾಗಿಯೂ ಇರುತ್ತದೆ. ಬೇಕು ಅಂತ ಅನಿಸಿದಾಗ ಸುಲಭವಾಗಿ, ಬೇಗನೆ ರೆಡಿಯಾಗುವ ಮೊಟ್ಟೆ ಪಲ್ಯವನ್ನು ಮಾಡುವುದು ಹೇಗೆಂದು ನೋಡೋಣ.

 
ಬೇಕಾಗಿರುವ ಸಾಮಾಗ್ರಿ : ಸಣ್ಣಗೆ ಹೆಚ್ಚಿದ ಈರುಳ್ಳಿ 2, ಶುಂಠಿಬೆಳ್ಳುಳ್ಳಿ ಪೇಸ್ಟ್ 1 ಚಮಚ, ಕೊತ್ತಂಬರಿ ಸೊಪ್ಪು, ಹೆಚ್ಚಿದ ಟೊಮೆಟೊ 1, ಬೇಯಿಸಿ ಸಿಪ್ಪೆ ತೆಗೆದ ಮೊಟ್ಟೆ 4, ಅಚ್ಚಖಾರದ ಪುಡಿ 1 ಚಮಚ, 1ಚಿಟಿಕೆ ಅರಶಿನ ಪುಡಿ, ಗರಂಮಸಾಲ 1ಚಮಚ, ದನಿಯಾ ಪುಡಿ 1 ಚಮಚ, ಉಪ್ಪು, 5 ಟೇಬಲ್ ಸ್ಪೂನ್ ಎಣ್ಣೆ.

 
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಎಣ್ಣೆ ಕಾಯಲು ಇಟ್ಟು ನಂತರ ಅದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿ ಅದು ಕೆಂಪಾದ ಮೇಲೆ ಶುಂಠಿಬೆಳ್ಳುಳ್ಳಿ ಪೇಸ್ಟ್, ಟೊಮೆಟೊ ಹಾಕಿ ಮತ್ತೆ ಚೆನ್ನಾಗಿ ಫ್ರೈಮಾಡಿ ನಂತರ ಅದಕ್ಕೆ ಅಚ್ಚಖಾರದ ಪುಡಿ, ಅರಶಿನ ಪುಡಿ, ದನಿಯಾ ಪುಡಿ, ಗರಂಮಸಾಲ ಪುಡಿ ಹಾಕಿ ಮಿಕ್ಸ್ ಮಾಡಿ ನಂತರ ಅದಕ್ಕೆ ½ ಗ್ಲಾಸ್ ನೀರು, ರುಚಿಗೆ ತಕಷ್ಟು ಉಪ್ಪು ಹಾಕಿ ಕುದಿಸಿ. ಮೊಟ್ಟೆ ಅನ್ನು ಪೀಸ್ ಮಾಡಿ ಅದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 5 ನಿಮಿಷ ಬೇಯಿಸಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ. ಈಗ ಮೊಟ್ಟೆ ಪಲ್ಯ ರೆಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ
Show comments