Publish Date: Fri, 12 Jan 2018 (06:52 IST)
Updated Date: Fri, 12 Jan 2018 (06:56 IST)
ಬೆಂಗಳೂರು : ಜೀವನವು ಸುಖಮಯವಾಗಿ ಸಾಗುತ್ತಿರುವಾಗ ಊಹಿಸದ ಕಷ್ಟಗಳು ಬಂದರೆ ಅವರಿಗೆ ಅದನ್ನು ಸಹಿಸಲಾಗುವುದಿಲ್ಲ. ಅವರಿಗೆ ಜೀವನದ ಮೇಲೆ ಜಿಗುಪ್ಸೆ ಮೂಡುವ ಸಂಭವವಿರುತ್ತದೆ. ಕೆಲವರು ಅದನ್ನು ಪರಿಹರಿಸಲಾಗದೆ ಸಾವಿಗೆ ಶರಣಾಗುವುದನ್ನು ನಾವು ಕೇಳಿರುತ್ತವೆ. ಹಾಗಾಗಿ ಇಂತಹ ಸಮಸ್ಯೆಗಳು ಎದುರಾದಾಗ ಒಂದು ಪರಿಹಾರ ಮಾರ್ಗವಿದೆ.
ಗುರುವಾರದಂದು ನಿದ್ರಿಸುವ ಮುನ್ನ ಒಂದು ತಾಮ್ರದ ಪಾತ್ರೆಯಲ್ಲಿ ಶುದ್ಧವಾದ ನೀರನ್ನು ಹಾಕಿ ಅದರಲ್ಲಿ ಸ್ವಲ್ಪ ಕೆಂಪು ಚಂದನವನ್ನು ಹಾಕಿ ಅದನ್ನು ಯಾರಿಗೆ ಸಮಸ್ಯೆ ಬಂದಿದೆಯೋ ಅವರು ಮಲಗುವ ಮಂಚದ ಕೆಳಗೆ ಅಂದರೆ ಅವರ ತಲೆಯ ಭಾಗದ ಕೆಳಗೆ ಆ ತಾಮ್ರದ ಪಾತ್ರವನ್ನು ಇಡಬೇಕು. ಮರುದಿನ ಬೆಳಿಗ್ಗೆ ಎದ್ದು ಆ ವ್ಯಕ್ತಿ ತಲೆಸ್ನಾನ ಮಾಡಿ ಆ ತಾಮ್ರದ ಪಾತ್ರೆಯಲ್ಲಿರುವ ನೀರನ್ನು ತುಳಸಿ ಗಿಡಕ್ಕೆ ಹಾಕಿಬೇಕು. ಹೀಗೆ 9 ಗುರುವಾರ ಈ ನಿಯಮವನ್ನು ಪಾಲಿಸಿದರೆ ಎಂತಹ ಸಮಸ್ಯೆ ಬಂದಿದ್ದರೂ ಅದಕ್ಕೆ ಪರಿಹಾರ ಸಿಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ