Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಸ್ಪರ್ಧಿ ಜೆಕೆ ಅವರ ಜೀವನಕ್ಕೆ ಹೊಸ ತಿರುವು ನೀಡಿದವರು ಯಾರು ಗೊತ್ತಾ...?

ಬಿಗ್ ಬಾಸ್ ಸ್ಪರ್ಧಿ ಜೆಕೆ ಅವರ ಜೀವನಕ್ಕೆ ಹೊಸ ತಿರುವು ನೀಡಿದವರು ಯಾರು ಗೊತ್ತಾ...?
ಬೆಂಗಳೂರು , ಶುಕ್ರವಾರ, 12 ಜನವರಿ 2018 (05:47 IST)
ಬೆಂಗಳೂರು : ಬಿಗ್ ಬಾಸ್ ಸಂಚಿಕೆಯೊಂದರಲ್ಲಿ ಸದ್ಯರಿಗೆ ಸಿಂಪಲ್ಲಾಗೊಂದು ಥ್ಯಾಂಕ್ಸ್  ಹೇಳಿ ಎಂಬ ಟಾಸ್ಕ್ ವೊಂದನ್ನು ನೀಡಿದ್ದು, ಅದರಲ್ಲಿ ಜೆಕೆ ಅವರು ತಮ್ಮ ಜೀವನವನ್ನೇ ಬದಲಾಯಿಸಿದ ಇಬ್ಬರು ವ್ಯಕ್ತಿಗಳಿಗೆ ಕೃತಜ್ಞತೆ ಹೇಳಿದ್ದಾರೆ.

 
ಜೆಕೆ ಜೀವನವನ್ನು ಬದಲಾಯಿಸಿದ ಆ ಇಬ್ಬರು ವ್ಯಕ್ತಿಗಳು  ಯಾರೆಂದರೆ ಸ್ಯಾಂಡಲ್ ವುಡ್ ನ ನಟ ಕಿಚ್ಚಿ ಸುದೀಪ್ ಹಾಗು ಅವರ ಪತ್ನಿ ಪ್ರಿಯ ಸುದೀಪ್. ಅವರಿಗೆ ಧನ್ಯವಾದ ತಿಳಿಸಿದ ಜೆಕೆ ಅವರು “ ನನ್ನ ಕಷ್ಟದ ಪರಿಸ್ಥಿತಿಯಲ್ಲಿ ಕೆಂಪೆಗೌಡ ಸಿನಿಮಾದಲ್ಲಿ ಚಾನ್ಸ್ ಕೊಟ್ರು, ನಂತರ ಸಿಸಿಎಲ್ ಟೂರ್ನಿಮೆಂಟ್ ನಲ್ಲಿ ತಂಡಕ್ಕೆ ಉಪನಾಯಕನನ್ನಾಗಿ ಮಾಡಿದರು. ನಂತರ ಅವರ ಪತ್ನಿ ನನಗೆ ಅಶ್ವಿನಿ ನಕ್ಷತ್ರ ಎಂಬ ಸೀರಿಯಲ್ ನಲ್ಲಿ ಅಭಿನಯಿಸುವ ಅವಕಾಶ ಕೊಡಿಸಿದರು. ಅದು ನನ್ನ ಜೀವನವನ್ನೇ ಬದಲಿಸಿತು. ನನ್ನನ್ನು ಅವರ ಕುಟುಂಬದಲ್ಲಿ ಒಬ್ಬರಾಗಿ ಮಾಡಿಕೊಂಡಿದ್ದಾರೆ. ನಾನು ಅವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಸಾಲದು” ಎಂದು ಹೇಳಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡಾಭಿಮಾನ ಪ್ರಶ್ನಿಸಿ ಟ್ರೋಲ್ ಮಾಡಿದವರಿಗೆ ಬಿಗ್ ಬಾಸ್ ಅಶಿತಾ ಚಂದ್ರಪ್ಪ ಕೊಟ್ಟ ತಿರುಗೇಟು ಏನು?