Publish Date: Thu, 11 Jan 2018 (06:17 IST)
Updated Date: Thu, 11 Jan 2018 (06:26 IST)
ಬೆಂಗಳೂರು : ಬಿಗ್ ಬಾಸ್ ಮನೆಯಿಂದ ಹೊರಬಂದ ಆಶಿತಾ ಅವರು ಈಗ ಫೇಸ್ ಬುಕ್ ನಲ್ಲಿ ತೆಲುಗು ಸಿನಿಮಾದ ಪೋಸ್ಟರ್ ಹಾಕಿಕೊಂಡಿರುವುದರಿಂದ ಕನ್ನಡ ಸಿನಿಮಾ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಆಶಿತಾ ಅವರು ತೆಲುಗು ನಟ ಪವನ್ ಕಲ್ಯಾಣ ಅಭಿನಯದ ಅಜ್ಞಾತವಾಸಿ ಸಿನಿಮಾದ ಪೋಸ್ಟರ್ ಹಾಕಿಕೊಂಡು ‘ಸಿನಿಮಾ ನಾಳೆ ರಿಲೀಸ್ ಆಗ್ತಿದೆ. ಕಾಯುವುದಕ್ಕೆ ಆಗ್ತಿಲ್ಲ’ ಎಂದು ಸ್ಟೇಟಸ್ ಬರೆದುಕೊಂಡಿದ್ದಾರೆ. ಇದರಿಂದ ಆಶಿತಾ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಸಿನಿಮಾದ ಬದಲು ತೆಲುಗು ಸಿನಿಮಾದ ಪೋಸ್ಟರ್ ಹಾಕಿದ್ದಾರೆ ಎಂದು ಅನೇಕರು ಆಶಿತಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಆಶಿತಾ ಅವರು ‘ನಾನು ಯಾವ ಸಿನಿಮಾ ಬೇಕಾದರೂ ನೋಡ್ತಿನಿ, ಸಿನಿಮಾಗೆ ಭಾಷೆಯ ಗಡಿಯಿಲ್ಲ. ಅದು ನನ್ನ ವೈಯಕ್ತಿಕ ವಿಚಾರ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ