Webdunia - Bharat's app for daily news and videos

Install App

ಸುಲಭವಾಗಿ ರೆಡಿಯಾಗುವ 'ಆಲೂ ಮಂಚೂರಿ'

Webdunia
ಶನಿವಾರ, 10 ಫೆಬ್ರವರಿ 2018 (17:23 IST)
ಬೆಂಗಳೂರು : ಆಲೂಗಡ್ಡೆ ಆರೋಗ್ಯಕ್ಕ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಅದನ್ನು ಉಪಯೋಗಿಸಿ ಹಲವಾರು ಬಗೆಯ ರೆಸಿಪಿಗಳನ್ನು ತಯಾರಿಸಬಹುದು. ಅದರಲ್ಲಿ ಒಂದು ಸುಲಭವಾದ ರೆಸಿಪಿ 'ಆಲೂ ಮಂಚೂರಿ'.


ತಯಾರಿಸಲು ಬೇಕಾಗುವ ಸಾಮಗ್ರಿಗಳು: ಆಲೂ ಗೆಡ್ಡೆ - 2 , ಕಾರ್ನ್ ಫ್ಲೋರ್- 1 ಕಪ್ ,ಅಚ್ಚ ಖಾರದ ಪುಡಿ - 1 ಚಮಚ , ಉಪ್ಪು - ರುಚಿಗೆ ತಕ್ಕಷ್ಟು , ಎಣ್ಣೆ - ಕರಿಯುವುದಕ್ಕೆ , ಈರುಳ್ಳಿ - 1 ದೊಡ್ಡದು, ಸಣ್ಣಗೆ ಹೆಚ್ಚಿದ್ದು , ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಸ್ವಲ್ಪ, ಶುಂಠಿ ಬೆಳ್ಳುಳ್ಳಿ ಸಣ್ಣಗೆ ಹೆಚ್ಚಿದ್ದು- ಸ್ವಲ್ಪ , ದಪ್ಪ ಮೆಣಸಿನಕಾಯಿ- 1, ಸಣ್ಣಗೆ ಹೆಚ್ಚಿದ್ದು , ಚಿಲ್ಲಿ ಸಾಸ್ - 1 ಚಮಚ , ಟೊಮೇಟೋ ಸಾಸ್ - 3 ಚಮಚ , ಕೊತ್ತಂಬರಿ ಸೊಪ್ಪು - ಸಣ್ಣಗೆ ಹೆಚ್ಚಿದ್ದು ಸ್ವಲ್ಪ.


ಮಾಡುವ ವಿಧಾನ: ಮೊದಲಿಗೆ, ಆಲೂಗೆಡ್ಡೆಯನ್ನು ಚೆನ್ನಾಗಿ ತೊಳೆದು, ಅದರ ಸಿಪ್ಪೆಯನ್ನು ತೆಗೆದು ಸಣ್ಣ ಸಣ್ಣ ಹೋಳುಗಳನ್ನಾಗಿ ಕತ್ತರಿಸಿಕೊಳ್ಳಿ. ಒಂದು ಬೌಲ್ನಲ್ಲಿ, ಕಾರ್ನ್ ಫ್ಲೋರ್, ಅಚ್ಚ ಖಾರದ ಪುಡಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ನೀರು ಹಾಕಿ ಕಲಿಸಿಟ್ಟುಕೊಳ್ಳಬೇಕು. ಸಣ್ಣ ಸಣ್ಣ ಹೋಳುಗಳನ್ನಾಗಿ ಕತ್ತರಿಸಿಕೊಂಡ ಆಲೂಗೆಡ್ಡೆಯನ್ನು ಅದರಲ್ಲಿ ಅದ್ದಿ ಕರದಿಟ್ಟುಕೊಳ್ಳಬೇಕು.

 
ನಂತರ ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು, ಅದಕ್ಕೆ ಎರಡು ಟೇಬಲ್ ಚಮಚ ಎಣ್ಣೆ ಹಾಕಿ ಅದು ಕಾದ ನಂತರ, ಮೊದಲಿಗೇ ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ತಾಳಿಸಬೇಕು. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಕೈ ಆಡಿಸಿ, ದಪ್ಪ ಮೆಣಸಿನಕಾಯಿ ಸಣ್ಣಗೆ ಹೆಚ್ಚಿದ್ದು ಹಾಗು ಶುಂಠಿ ಬೆಳ್ಳುಳ್ಳಿ ಸಣ್ಣಗೆ ಹೆಚ್ಚಿದ್ದು ಹಾಕಬೇಕು.

 
ಇನ್ನು ಇದೆಲ್ಲಾವನ್ನು ಚೆನ್ನಾಗಿ ತಾಳಿಸಿದ ನಂತರ ಕಾರ್ನ್ ಫ್ಲೋರ್ ನಲ್ಲಿ ಮೊದಲೇ ಕರಿದಿಟ್ಟುಕೊಂಡ ಆಲೂ ಹೋಳುಗಳನ್ನು ಹಾಕಬೇಕು. ಅದಕ್ಕೆ ಚಿಲ್ಲಿ ಸಾಸ್ ಒಂದು ಚಮಚ ಹಾಗು ಟೊಮೇಟೋ ಸಾಸ್ ಮೂರು ಚಮಚ ಕ್ರಮವಾಗಿ ಹಾಕಿ ಮಿಕ್ಸ್ ಮಾಡಬೇಕು.

 
ಒಲೆಯನ್ನು ಆರಿಸಿ, ಪ್ಯಾನ್‌ನಲ್ಲಿ ತಾಳಿಸಿದ ಎಲ್ಲವನ್ನೂ ಒಂದು ಬೌಲ್‌ಗೆ ಸುರಿದುಕೊಂಡು ಅದರ ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ, ಬಿಸಿಬಿಸಿಯಾದ ಆಲೂ ಮಂಚೂರಿ ಸವಿಯಲು ಸಿದ್ಧ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments