Select Your Language

Notifications

webdunia
webdunia
webdunia
webdunia

ಹಲಸಿನ ಹಣ್ಣಿನಿಂದ ಏನೆಲ್ಲಾ ಮಾಡಬಹುದು ಗೊತ್ತಾ?

ಹಲಸಿನ ಹಣ್ಣಿನಿಂದ ಏನೆಲ್ಲಾ ಮಾಡಬಹುದು ಗೊತ್ತಾ?

ಅತಿಥಾ

ಬೆಂಗಳೂರು , ಗುರುವಾರ, 28 ಡಿಸೆಂಬರ್ 2017 (12:51 IST)
ಹಲಸಿನ ಹಣ್ಣು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹಲವಾರು ಪೋಷಕಾಂಶ ಭರಿತ ಈ ಹಣ್ಣನ್ನು ತಿನ್ನುವುದು ಮಾತ್ರವಲ್ಲ ಅದರಿಂದ ಹಲವಾರು ತಿನಿಸುಗಳನ್ನು ತಯಾರಿಸಬಹುದು. ಇವು ರುಚಿಕರವು ಹೌದು ಆರೋಗ್ಯದಾಯಕವು ಹೌದು.
ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ತಯಾರಿಸುವಂತ ತಿಂಡಿಗಳಲ್ಲಿ ಹಲಸಿನ ಹಣ್ಣಿನ ಇಡ್ಲಿ/ಕಡಬು ತುಂಬಾನೇ ಜನಪ್ರಿಯ ಅದನ್ನು ಹೇಗೆ ತಯಾರಿಸುವುದು ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.
 
ಹಲಸಿನ ಹಣ್ಣಿನ ಇಡ್ಲಿ / ಕಡಬು
 
ಬೇಕಾಗುವ ಸಾಮಗ್ರಿಗಳು -
 
ಹಲಸಿನ ಹಣ್ಣಿನ ತೊಳೆ - 2 ರಿಂದ 3  ಕಪ್
ಅಕ್ಕಿ ತರಿ - 3/4 ರಿಂದ 1 ಕಪ್
ಬೆಲ್ಲ - 1/2 ಕಪ್
ಉಪ್ಪು
ಚಿಟಕಿ ಏಲಕ್ಕಿ ಪುಡಿ
1 ಚಮಚ ತುಪ್ಪ
 
ಮಾಡುವ ವಿಧಾನ -
ಹಲಸಿನಹಣ್ಣಿನ ತೊಳೆಗಳಿಂದ ಬೀಜಗಳನ್ನು ಬೇರ್ಪಡಿಸಿ ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ನಂತರ ಮೇಲೆ ಹೇಳಿರುವಷ್ಟು ಅಕ್ಕಿ ತರಿಯನ್ನು ರುಬ್ಬಿದ ಹಲಸಿನ ತೊಳೆ ಮಿಶ್ರಣದಲ್ಲಿ ಹಾಕಿ ಚೆನ್ನಾಗಿ ಕದಡಿ ನಂತರ ಅದಕ್ಕೆ ಬೆಲ್ಲ, ಏಲಕ್ಕಿ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ. ಅದು ಇಡ್ಲಿ ಹಿಟ್ಟಿಗಿಂತ ಸ್ವಲ್ಪ ತೆಳ್ಳಗಿರಲಿ, ನಂತರ ಕಲಸಿದ ಹಿಟ್ಟನ್ನು 10 ರಿಂದ 20 ನಿಮಿಷಗಳ ಕಾಲ ಹಾಗೇ ಬಿಡಿ. ತದನಂತರ ಇಡ್ಲಿ ತಟ್ಟೆಗೆ ಎಣ್ಣೆ ಸವರಿ ಈ ಹಿಟ್ಟಿನ ಮಿಶ್ರಣವನ್ನು ಸುರಿದು ಸುಮಾರು 30 ನಿಮಿಷಗಳವರೆಗೆ ಬೇಯಿಸಿದರೆ ಹಲಸಿನ ಹಣ್ಣಿನ ಇಡ್ಲಿ/ಕಡಬು ಸವಿಯಲು ಸಿದ್ದ. ಇದನ್ನು ಬಾಳೆ ಎಲೆ ಅರಿಶಿನ ಎಲೆಯಲ್ಲೂ ಮಾಡಬಹುದು. ಬಾಳೆ ಎಲೆಯಲ್ಲಿ ಮಾಡಿದರೆ ಕನಿಷ್ಠ ಒಂದು ಘಂಟೆಯಾದರೂ ಬೇಯಿಸಬೇಕು. ಇದು ತುಪ್ಪದೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹಲವು ರೋಗಗಳಿಗೆ ರಾಮಬಾಣ ಕರಿಬೇವು