ಬೆಂಗಳೂರು: ಗ್ರೀನ್ ಟೀ ನಮ್ಮ ಆರೋಗ್ಯಕ್ಕೆ ಎಲ್ಲಾ ರೀತಿಯಿಂದಲೂ ಒಳ್ಳೆಯದು ಎಂದು ನಮಗೆ ಗೊತ್ತು. ಆದರೆ ಅದನ್ನು ದಿನಕ್ಕೆ ಎಷ್ಟು ಬಾರಿ ಮತ್ತು ಯಾವಾಗ ಕುಡಿದರೆ ಉತ್ತಮ ಎಂದು ನಿಮಗೆ ಗೊತ್ತೇ?
 
ತಜ್ಞರ ಪ್ರಕಾರ ಗ್ರೀನ್ ಟೀಯಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್, ಫೈಬರ್ ಅಂಶವಿದೆ. ಹಾಗೂ ಇದು ದೇಹ ನಿರ್ಜಲೀಕರಣಕ್ಕೊಳಗಾಗದಂತೆಯೂ ತಡೆಯುತ್ತದೆ.
									
			
			 
 			
 
 			
			                     
							
							
			        							
								
																	ಆದರೆ ಹಾಗಂತ ಬೇಕಾಬಿಟ್ಟಿ ಗ್ರೀನ್ ಟೀ ಕುಡಿಯುವುದೂ ಒಳ್ಳೆಯದಲ್ಲ. ದಿನವೊಂದಕ್ಕೆ ಮೂರು ಕಪ್ ಗ್ರೀನ್ ಟೀ ಸೇವಿಸಬಹುದು. ಅದೂ ಬೆಳಗ್ಗೆ ಮತ್ತು ಸಂಜೆ ಹೊತ್ತು ಗ್ರೀನ್ ಟೀ ಸೇವನೆ ಉತ್ತಮ. ಇದು ದೇಹದ ಮೆಟಾಬೋಲಿಸಂ ಹೆಚ್ಚಿಸುವುದರಿಂದ ಈ ಸಮಯದಲ್ಲಿ ಗ್ರೀನ್ ಟೀ ಸೇವನೆ ಉತ್ತಮ ಎಂದು ತಜ್ಞರು ಹೇಳುತ್ತಾರೆ.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ