Select Your Language

Notifications

webdunia
webdunia
webdunia
webdunia

ಬಹು ಉಪಕಾರಿ ಈ ತರಕಾರಿ ನಿಮಗೆ ತಿಳಿದಿದೆಯೇ?

ಬಹು ಉಪಕಾರಿ ಈ ತರಕಾರಿ ನಿಮಗೆ ತಿಳಿದಿದೆಯೇ?

ಅತಿಥಾ

ಬೆಂಗಳೂರು , ಶುಕ್ರವಾರ, 15 ಡಿಸೆಂಬರ್ 2017 (16:19 IST)
ನಾವು ದಿನನಿತ್ಯ ಬಳಸುವ ತರಕಾರಿಗಳ ಕುರಿತು ನಮಗೆ ಕೆಲವೊಂದು ವಿಷಯಗಳನ್ನು ನಾವು ತಿಳಿದಿರುವುದಿಲ್ಲ ಅದನ್ನು ನಾವು ಕೇವಲ ಅಡುಗೆ ಮಾಡಲು ಮಾತ್ರ ಬಳಸುತ್ತೇವೆ ಎಂದು ತಿಳಿದಿರುತ್ತೇವೆ ಆದರೆ ನಮಗೆ ಗೊತ್ತಿರದ ಕೆಲವು ಔಷಧಿಯ ಗುಣಗಳು ನಾವು ಪ್ರತಿನಿತ್ಯ ಬಳಸುವ ವಸ್ತುಗಳಲ್ಲಿ ಅಡಕವಾಗಿರುತ್ತದೆ ಅದು ಯಾವುದು ಅಂತೀರಾ ಇಲ್ಲಿದೆ ಪೂಲ್ ಡಿಟೇಲ್ಸ್..
ನಾವು ಈಗ ಹೇಳ ಹೊರಟಿರುವುದು ಪಾಲಕ್ ಸೊಪ್ಪಿನ ಕುರಿತು ಅದರ ಉಪಯೋಗ ಮತ್ತು ಗುಣಗಳ ಕುರಿತು ಅದರಲ್ಲಿರುವ ಗುಣಗಳು ನೀವು ತಿಳಿಯಬೇಕಾದರೆ ಮುಂದೆ ಓದಿ.
 
ತರಕಾರಿಯಾಗಿ ಆಡುಗೆಯಲ್ಲಿ ಉಪಯೋಗಿಸಲ್ಪಡುವ ಪಾಲಕ್ ಸೊಪ್ಪಿನಲ್ಲಿ ಹೇರಳವಾಗಿ ನಾರಿನಂಶ, ಪ್ರೋಟಿನ್‍ಗಳು ಇವೆ. ಮುಖ್ಯವಾಗಿ ಇದರಲ್ಲಿ ಕಬ್ಬಿಣಾಂಶವಿದ್ದು, ಪಾಲಕ್ ಸೊಪ್ಪನ್ನು ವಾರಕ್ಕೆ 3 ಬಾರಿ ಸೇವಿಸಿದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಷ್ಟೇ ಅಲ್ಲ ಇದು ಸೌಂದರ್ಯ ವರ್ಧಕವು ಹೌದು ಇದು ನಮ್ಮ ತ್ವಚೆಯನ್ನು ಕಾಪಾಡುವುದರೊಂದಿಗೆ ಸೋರಿಯಾಸಿಸ್, ತುರಿಕೆ ಮತ್ತು ಒಣಚರ್ಮವನ್ನು ತಡೆಯುವ ಒಳ್ಳೆಯ ಗುಣಗಳನ್ನು ಇದು ಹೊಂದಿದೆ.ಅಲ್ಲದೇ ಕೂದಲ ಬೆಳವಣಿಗೆಗೂ ಇದು ಸಹಾಯಕಾರಿ.
 
ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಬಿ, ಸಿ, ಇ, ಪೊಟ್ಯಾಷಿಯಂ, ಕಬ್ಬಿಣ ಮತ್ತು ಒಮೆಗಾ 3 ಕೊಬ್ಬಿನ ಆಮ್ಲಗಳಿವೆ. ಈ ಅಂಶಗಳು, ಕೂದಲ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಪಾಲಕ್ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕಬ್ಬಿಣದ ಅಂಶ ಕೆಂಪು ರಕ್ತಕಣಗಳನ್ನು ಬಲಪಡಿಸಿ ಆಮ್ಲಜನಕವನ್ನು ಪ್ರತಿ ಕೂದಲ ಬುಡಕ್ಕು ತಲುಪಿಸಲು ಸಹಾಯಕಾರಿ ಆಗಿದೆ. ಪಾಲಕ್ ಸೊಪ್ಪಿನ ನಿಯಮಿತ ಸೇವನೆಯಿಂದ ಕೂದಲ ಉದುರುವಿಕೆಯನ್ನು ತಡೆಯಬಹುದು. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ ಮತ್ತು ಎ ಇರುವುದರಿಂದ ಇವುಗಳು ತ್ವಚೆಯ ಸೆಳೆತ ಮತ್ತು ಕಾಂತಿ ಹೆಚ್ಚಿಸಲು ನೆರವಾಗುತ್ತದೆ, ಹಾಗೆಯೇ ವಿಟಮಿನ್ ಸಿ ಹೊಸ ಜೀವಕೋಶಗಳ ಹುಟ್ಟಿಗೆ ನೆರವಾಗುತ್ತದೆ.ಅಲ್ಲದೆ ಹಳೆಯ ಕಲೆಗಳಿಂದ ಕೂಡಿರುವ ತ್ವಚೆಯ ಭಾಗವನ್ನು ಇದು ತಿಳಿಯಾಗಿಸುತ್ತದೆ. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಕೆ ಇದ್ದು, ಇದು ಬಿಸಿಲಿನಿಂದ ಕಪ್ಪಗಿರುವ ಚರ್ಮವನ್ನು ಸಹಜ ಬಣ್ಣಕ್ಕೆ ತರಲು ನೆರವಾಗುತ್ತದೆ. ಪಾಲಕ್ ಸೊಪ್ಪು ಮಧುಮೇಹ ನಿವಾರಣೆ, ಕ್ಯಾನ್ಸರ್ ತಡೆಗಟ್ಟುವಿಕೆ, ಆಸ್ತಮಾ ಸೇರಿದಂತೆ ಮೂಳೆಯ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
 
ಪಾಲಕ್ ಅನ್ನು ಸೌಂದರ್ಯ ವೃಧಿಗಾಗಿ ಹೇಗೆಲ್ಲಾ ಬಳಸಬಹುದು ಎಂಬುದು ಇಲ್ಲಿದೆ -
 
1. ಕೂದಲು ಬೆಳವಣಿಗೆಗಾಗಿ
 
ಅರ್ಧ ಕಪ್ ಪಾಲಕ್ ಅನ್ನು ರುಬ್ಬಿ ತಿರುಳನ್ನು ಹೊರತೆಗೆಯಿರಿ. ಅದಕ್ಕೆ ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಗೆ ಪಾಲಕ್ ತಿರುಳನ್ನು ಸೇರಿಸಿ. ಕೂದಲ ಬೇರುಗಳಿಗೆ ಅದನ್ನು ಹಚ್ಚಿ ಒಂದು ಗಂಟೆಯವರೆಗೆ ಅದನ್ನು ಬಿಡಿ. ಶಾಂಪೂ ಮತ್ತು ಕಂಡಿಷನರ್ ಬಳಸಿ ಕೂದಲನ್ನು ತೊಳೆದುಕೊಳ್ಳಿ. ಇದು ನಿಮ್ಮ ಕೂದಲನ್ನು ಪೋಷಿಸಿ ಕೂದಲು ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
 
2. ಮೊಡವೆ ನಿಯಂತ್ರಿಸಲು
 
ಸ್ವಲ್ಪ ನೀರಿನೊಂದಿಗೆ ಪಾಲಕ ಮಿಶ್ರಣ ಮಾಡಿ ಚೆನ್ನಾಗಿ ರುಬ್ಬಿ ಮತ್ತು ಅದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. 20 ರಿಂದ 25 ನಿಮಿಷಗಳ ನಂತರ ಮುಖ ತೊಳೆದುಕೊಳ್ಳಿ. ಇದು ಮುಖದ ಎಲ್ಲಾ ಕೊಳಕು, ತೈಲ ಮತ್ತು ಕಲ್ಮಶಗಳನ್ನು ತೆಗೆದುಹಾಕುತ್ತದೆ, ನಿಮ್ಮ ಚರ್ಮವನ್ನು ಪುನಶ್ಚೇತನಗೊಳಿಸುತ್ತದೆ ಮತ್ತು ಮೊಡವೆಗಳನ್ನು ನಿಯಂತ್ರಿಸುತ್ತದೆ.
 
3. ಚರ್ಮದ ಬಣ್ಣವನ್ನು ತಿಳಿಯಾಗಿಸುತ್ತದೆ ಮತ್ತು ಹೊಳೆಯುವ ಕಲೆರಹಿತ ಚರ್ಮಕ್ಕಾಗಿ
 
ಸ್ವಲ್ಪ ಹಾಲಿನೊಂದಿಗೆ ಪಾಲಕ ಮಿಶ್ರಣ ಮಾಡಿ ರುಬ್ಬಿ, ಅದಕ್ಕೆ ಮಲ್ತಾನಿ ಮಿಟ್ಟಿಯನ್ನು ಸೇರಸಿ ಫೇಸ್ ಪ್ಯಾಕ್ ತಯಾರಿಸಿ, ಮುಖಕ್ಕೆ ಲೇಪಿಸಿ 15-20 ನಿಮಿಷದ ನಂತರ ಉಗುರು ಬೆಚ್ಚನೆಯ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೆಮ್ಮು, ಕಫ, ನೆಗಡಿ, ಜ್ವರಗಳಿಗೆ ಮನೆ ಮದ್ದುಗಳು....