Daily Horoscope

Select Your Language

Notifications

webdunia
webdunia
webdunia
webdunia

ಅನೈತಿಕ ಸಂಬಂಧ: ಯುವತಿಯನ್ನು ಹತ್ಯೆಗೈದು ತನ್ನ ಅಂಗಡಿಯಲ್ಲಿಯೇ ಹೂತುಹಾಕಿದ ಭೂಪ

ಹದಿಹರೆಯದ ಯುವತಿ
17 ವರ್ಷದ ಹದಿಹರೆಯದ ಯುವತಿಯ ಕತ್ತು ಸೀಳಿ ತನ್ನ ಅಂಗಡಿಯಲ್ಲಿಯೇ ಆಕೆಯನ್ನು ಹೂತು ಹಾಕಿದ್ದ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ.
 
 ಪಿಂಪ್ರಿ ತರಕಾರಿ ಮಾರುಕಟ್ಟೆಯಲ್ಲಿರುವ ತನ್ನ ಅಂಗಡಿಯಲ್ಲಿಯೇ ಹದಿಹರೆಯದ ಯುವತಿಯನ್ನು ಹೂತು ಹಾಕಿರುವ ಮಾಹಿತಿ ಪಡೆದ ಪೊಲೀಸರು ಹೂತುಹಾಕಿದ್ದ ಸ್ಥಳವನ್ನು ಮತ್ತೆ ಅಗೆದು ಮೃತ ದೇಹವನ್ನು ಹೊರತೆಗೆದು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
 
ಪೊಲೀಸರು ಬಂಧಿಸುತ್ತಿದ್ದಂತೆ ಆರೋಪಿ ತಾನು ಅನಾರೋಗ್ಯದಿಂದ ಬಳಲುತ್ತಿರುವ ನೆಪವೊಡ್ಡಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
 
ಪೊಲೀಸ್ ಅಧಿಕಾರಿ ವಿ.ವಿ.ಮುಂಗಳಿಕರ್ ಪ್ರಕಾರ, ಆರೋಪಿ ವಿವಾಹಿತನಾಗಿದ್ದು ಮೂರು ಮಕ್ಕಳ ತಂದೆಯಾಗಿದ್ದಾನೆ. ಮತ್ತೊಬ್ಬ ಹದಿಹರೆಯದ ಯುವತಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದಾರೆ. ಆದರೆ, ಆಕೆಯ ಬೇಡಿಕೆಗಳು ಹೆಚ್ಚಾಗಿದ್ದರಿಂದ ಕೋಪಗೊಂಡು ಆರೋಪಿ ಆಕೆಯ ಹತ್ಯೆಗೈದಿದ್ದಾನೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ, ಆರೆಸ್ಸೆಸ್ ಪ್ರೇರಣಿಯಿಂದ ನಮ್ಮ ಮೇಲೆ ದಾಳಿ: ರಾಹುಲ್ ಗಾಂಧಿ