ಬೆಂಗಳೂರು : ಕೊಬ್ಬರಿಯಿಂದ ತಯಾರಿಸಿದ ಯಾವುದೇ ತಿಂಡಿಗಳು ತುಂಬಾ ರುಚಿಕರವಾಗಿರುತ್ತದೆ. ಆದಕಾರಣ ಮಕ್ಕಳು ತುಂಬಾ ಇಷ್ಟಪಡುವಂತಹ ಕೊಬ್ಬರಿ ಲಾಡನ್ನು ಮನೆಯಲ್ಲಿಯೇ ತಯಾರಿಸಿ ಕೊಡಿ.
ಕೊಬ್ಬರಿ ಲಾಡು ತಯಾರಿಸಲು ಬೇಕಾದ ಸಾಮಾಗ್ರಿಗಳು:
ಕಾಯಿತುರಿ 2 ಕಪ್, ಕಂಡೆನ್ಸಡ್ ಮಿಲ್ಕ್ 2 ಕಪ್, ಸಕ್ಕರೆ 1 ಕಪ್, ಏಲಕ್ಕಿ ಪುಡಿ ಸ್ವಲ್ಪ, ಬಾದಾಮಿ ಸ್ವಲ್ಪ, ತುಪ್ಪ ಸ್ವಲ್ಪ
ಮಾಡುವ ವಿಧಾನ :
ಕಾಯಿತುರಿಯನ್ನು ಎಣ್ಣೆ ಹಾಕದೆ ಕಡಿಮೆ ಉರಿಯಲ್ಲಿ ನೀರಿನಾಂಶ ಹೋಗುವವರೆಗೂ ಹುರಿದುಕೊಳ್ಳಿ. ನಂತರ ಅದಕ್ಕೆ ಕಂಡೆನ್ಸಡ್ ಮಿಲ್ಕ್ ಹಾಕಿ ಬೇಯಿಸಿಕೊಳ್ಳಿ. ಬಳಿಕ ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಹಾಕಿ ಬೇಯಿಸಿಕೊಳ್ಳಿ. ಈ ಮಿಶ್ರಣ ಗಟ್ಟಿಯಾದ ಮೇಲೆ ಕೆಳಗಿಳಿಸಿ ಸ್ವಲ್ಪ ತಣ್ಣಗಾದ ಮೇಲೆ ಕೈಗೆ ತುಪ್ಪ ಸವರಿಕೊಂಡು ಉಂಡೆ ಮಾಡಿಕೊಳ್ಳಿ. ಅದರ ಮೇಲೆ ಬಾದಾಮಿ ಇಟ್ಟು ಅಲಂಕರಿಸಿದರೆ ಕೊಬ್ಬರಿ ಲಾಡು ರೆಡಿ.