Select Your Language

Notifications

webdunia
webdunia
webdunia
webdunia

ಮಹಿಳೆಯರ ಸುರಕ್ಷತೆಗೆ ಸುರಕ್ಷಾ ಆಪ್! ಡೌನ್ ಲೋಡ್ ಮಾಡೋದು ಸುಲಭ

ಮಹಿಳೆಯರ ಸುರಕ್ಷತೆಗೆ ಸುರಕ್ಷಾ ಆಪ್! ಡೌನ್ ಲೋಡ್ ಮಾಡೋದು ಸುಲಭ
ಬೆಂಗಳೂರು , ಬುಧವಾರ, 4 ಡಿಸೆಂಬರ್ 2019 (10:30 IST)
ಬೆಂಗಳೂರು: ಹೈದರಾಬಾದ್ ನಲ್ಲಿ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅತ್ಯಾಚಾರ, ಕೊಲೆ ಪ್ರಕರಣದ ಬಳಿಕ ಎಚ್ಚೆತ್ತುಕೊಂಡ ರಾಜ್ಯ ಪೊಲೀಸರು ಮಹಿಳೆಯರ ಸುರಕ್ಷತೆಗಾಗಿಯೇ ಒಂದು ಆಪ್ ಬಿಡುಗಡೆ ಮಾಡಿದ್ದಾರೆ.


‘ಸುರಕ್ಷಾ’ ಎಂಬ ಹೆಸರಿನ ಆಪ್ ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡರೆ ಯಾವುದೇ ಸಮಸ್ಯೆಯಾಗಿದ್ದಲ್ಲಿ ಒಂದು ಬಟನ್ ಒತ್ತಿದರೆ ಸಾಕು. ಪೊಲೀಸರ ತಕ್ಷಣವೇ ನಿಮ್ಮ ನೆರವಿಗೆ ಬರಲಿದ್ದಾರೆ. ಬೆಂಗಳೂರು ಪೊಲೀಸರು ಇಂತಹದ್ದೊಂದು ಹೊಸ ಆಪ್ ಬಿಡುಗಡೆ ಮಾಡಿದ್ದಾರೆ.

ಪ್ಲೇ ಸ್ಟೋರ್ ನಲ್ಲಿ ಈ ಆಪ್ ಲಭ್ಯವಿದ್ದು, ಮಹಿಳಾ ಸುರಕ್ಷಾ ಆಪ್ ಎಂದು ಕೊಟ್ಟರೆ ತೆರೆದುಕೊಳ್ಳುತ್ತದೆ. ಈಗಾಗಲೇ ಒಂದು ಲಕ್ಷಕಕ್ಕೂ ಅಧಿಕ ಮಂದಿ ಇದನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಜತೆಗೆ ಇದನ್ನು ಬಳಸಿರುವ ಬಳಕೆದಾರರೂ ಇದೊಂದು ಅತ್ಯುತ್ತಮ ಆಪ್ ಎಂದು ಉತ್ತಮ ರೇಟಿಂಗ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಅಭ್ಯರ್ಥಿ ಕೆಬಿ ಕೋಳಿವಾಡ ಮನೆ ಮೇಲೆ ಐಟಿ ದಾಳಿ