Publish Date: Wed, 04 Dec 2019 (10:08 IST)
Updated Date: Wed, 04 Dec 2019 (10:11 IST)
ಬೆಂಗಳೂರು: ಇಡೀ ರಾಷ್ಟ್ರವೇ ಬೆಚ್ಚಿಬಿದ್ದ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆ ಆಕ್ರೋಶ ದಿನೇ ದಿನೇ ಹೆಚ್ಚುತ್ತಿದೆ. ಕೊನೆಯ ಕ್ಷಣದಲ್ಲಿ ತಮ್ಮ ಮಗಳು ಮಾತಾಡಿದ್ದು ಏನೆಂದು ಪ್ರಿಯಾಂಕ ತಾಯಿ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ಘಟನೆ ನಡೆಯುವ ಕೆಲವೇ ಕ್ಷಣಗಳ ಮೊದಲು ಮನೆಗೆ ಹೊರಡುವ ಮೊದಲು ಕರೆ ಮಾಡಿದ್ದ ಮಗಳು ‘ಅಮ್ಮಾ ತುಂಬಾ ಹಸಿವಾಗುತ್ತಿದೆ. ಹಣ್ಣು ಕತ್ತರಿಸಿಡು’ ಎಂದಿದ್ದಳು ಎನ್ನುತ್ತಾ ಪ್ರಿಯಾಂಕಾ ತಾಯಿ ಮಾಧ್ಯಮಗಳ ಎದುರು ಕಣ್ಣೀರು ಹಾಕಿದ್ದಾರೆ.
ಅದಲ್ಲದೆ, ತಂಗಿಗೆ ಕರೆ ಮಾಡುವ ಬದಲು ಪೊಲೀಸ್ ಸಹಾಯವಾಣಿ 100 ಕ್ಕೆ ಕರೆ ಮಾಡಿದ್ದರೆ ಆಕೆ ಬದುಕುತ್ತಿದ್ದಳು ಎಂದಿದ್ದ ಸಲಹೆಗೆ ಕಿಡಿ ಕಾರಿರುವ ಅವರು ‘ಆ ಸಂಖ್ಯೆಗೆ ಕರೆ ಮಾಡಿದರೆ ಹಲವು ಹಂತಗಳ ಪಾಲನೆ ಮಾಡಬೇಕಾಗುತ್ತದೆ. ಆ ಗಾಬರಿಯಲ್ಲಿ ಅದೆಲ್ಲಾ ಸಾಧ‍್ಯವಿತ್ತೇ?’ ಎಂದು ಪ್ರಶ್ನಿಸಿದ್ದಾರೆ.