Select Your Language

Notifications

webdunia
webdunia
webdunia
webdunia

ಮನೆಯಲ್ಲೇ ಮಾಡಿ, ಹೋಟೆಲ್ ಶೈಲಿಯ ಸಾಫ್ಟ್ ಇಡ್ಲಿ

ಮನೆಯಲ್ಲೇ ಮಾಡಿ, ಹೋಟೆಲ್ ಶೈಲಿಯ ಸಾಫ್ಟ್ ಇಡ್ಲಿ
ಬೆಂಗಳೂರು , ಶನಿವಾರ, 13 ನವೆಂಬರ್ 2021 (07:03 IST)
ಅಕ್ಕಿಯಿಂದ ಮೃದುವಾದ ಹಾಗೂ ಆರೋಗ್ಯಕರವಾದ ಆಹಾರವನ್ನು ತಯಾರಿಸಬೇಕು ಎಂದರೆ ಅದು ಇಡ್ಲಿ ಪಾಕವಿಧಾನ.
ಪೋಷಕಾಂಶ ಭರಿತವಾದ ಈ ಖಾದ್ಯವನ್ನು ಎಲ್ಲಾ ವಯೋಮಾನದವರು ಸಹ ಸವಿಯಬಹುದು. ರೋಗ ಪೀಡಿತರಿಗೂ ಈ ತಿಂಡಿ ಉತ್ತಮ ಆಯ್ಕೆ ಆಗುವುದು. ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮುಂಜಾನೆಯ ತಿಂಡಿಯನ್ನಾಗಿ ತಯಾರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮುಂಜಾನೆಯ ತಿಂಡಿಯನ್ನಾಗಿ ತಯಾರಿಸಲಾಗುತ್ತದೆ. ಇದನ್ನು ದಿನದ ಎಲ್ಲಾ ಸಮಯದಲ್ಲಿಯೂ ಸವಿಯಬಹುದು. ಯಾವುದೇ ಆರೋಗ್ಯ ಸಮಸ್ಯೆ ಅಥವಾ ಅಡ್ಡ ಪರಿಣಾಮ ಬೀರದು. ಆರೋಗ್ಯಕರವಾದ ಈ ತಿಂಡಿಯನ್ನು ನೀವು ಸಹ ತಯಾರಿಸಬೇಕು ಎಂದರೆ ಈ ಮುಂದಿನ ಸರಳ ವಿಧಾನವನ್ನು ಅನುಸರಿಸಿ, ತಯಾರಿಸಿ.
 ಬೇಕಾಗುವ ಸಾಮಗ್ರಿಗಳು
•  1 ಕಪ್ ಅಕ್ಕಿ
•  1/3 ಕಪ್ ಉದ್ದಿನ ಬೇಳೆ
•  1/4 ಚಮಚ ಕಸೂರಿ ಮೇತಿ ಎಲೆ
•  ಅಗತ್ಯಕ್ಕೆ ತಕ್ಕಷ್ಟು ನೀರು
ಒಂದು ಪಾತ್ರೆಯಲ್ಲಿ ಉದ್ದಿನ ಬೇಳೆ ಮತ್ತು ಮೆಂತ್ಯೆ ಕಾಳನ್ನು ಸೇರಿಸಿ, ನೆನೆಸಿಡಿಇನ್ನು ಪ್ರತ್ಯೇಕ ಪಾತ್ರೆಯಲ್ಲಿ ಅಕ್ಕಿಯನ್ನು ನೆನೆಯಿಡಿ.
ಮೃದುವಾದ ಇಡ್ಲಿ ಮನೆಯಲ್ಲೇ ಮಾಡಿ
ಇವುಗಳನ್ನು 6 ತಾಸು ಅಥವಾ ರಾತ್ರಿ ನೆನೆಯಿಡಬೇಕು.ನೆನೆದ ನಂತರ ಉದ್ದು ಮತ್ತು ಮೆಂತ್ಯೆಯನ್ನು ಮಿಕ್ಸರ್ ಪಾತ್ರೆಗೆ ಸೇರಿಸಿ, ಮೃದುವಾಗಿ ರುಬ್ಬಿಕೊಳ್ಳಬೇಕು.ಪ್ರತ್ಯೇಕವಾಗಿ ಅಕ್ಕಿಯನ್ನು ಕಡಿ ಕಡಿಯಾಗಿ ರುಬ್ಬಿಕೊಳ್ಳಿ.ನಂತರ ರುಬ್ಬಿಕ್ಕೊಂಡ ಉದ್ದು ಮತ್ತು ಅಕ್ಕಿಯನ್ನು ಸೇರಿಸಿ, ಮಿಶ್ರಗೊಳಿಸಿ.
ಇಡ್ಲಿ ಪ್ಲೇಟಿಗೆ ಎಣ್ಣೆ ಅಥವಾ ತುಪ್ಪವನ್ನು ಸವರಿಕೊಳ್ಳಿ.ಬಳಿಕ ಹಿಟ್ಟನ್ನು ಸೇರಿಸಿ. ಕುಕ್ಕರ್ ಪಾತ್ರೆಗೆ ನೀರನ್ನು ಸೇರಿಸಿ, ಇಡ್ಲಿಯನ್ನು ಇಡಿ.ಕುಕ್ಕರ್ ಪಾತ್ರೆಯ ಮುಚ್ಚಳವನ್ನು ಮುಚ್ಚಿ 8-10 ನಿಮಿಷಗಳ ಕಾಲ ಬೇಯಿಸಿ.
ಮುಚ್ಚಳವನ್ನು ತೆರೆದು, ಬೆಂದಿದೆಯೇ? ಎಂದು ಪರೀಕ್ಷಿಸಬೇಕು. ಹಾಗೊಮ್ಮೆ ಬೆಂದಿಲ್ಲ ಎಂದಾದರೆ ಬೇಯಿಸುವುದನ್ನು ಮುಂದುವರಿಸಿ.ಬೆಂದ ಬಳಿಕ ಇಡ್ಲಿಯನ್ನು ಪ್ಲೇಟ್ಗೆ ವರ್ಗಾಯಿಸಿ, ಚಟ್ನಿ ಅಥವಾ ಸಾಂಬರ್ ನೊಂದಿಗೆ ಸವಿಯಲು ನೀಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದಲ್ಲಿ ವ್ಯಾಯಾಮಕ್ಕೆ ಈ ರೀತಿ ತಯಾರಿ ಮಾಡಿಕೊಳ್ಳಿ