Webdunia - Bharat's app for daily news and videos

Install App

ಪೌಷ್ಟಿಕಾಂಶಗಳು ಯಾವ್ಯಾವ ಆಹಾರ ಪದಾರ್ಥಗಳಲ್ಲಿವೆ ಎಂಬುದು ತಿಳಿದಿದೆಯೇ?

Webdunia
ಸೋಮವಾರ, 25 ಮಾರ್ಚ್ 2019 (13:54 IST)
ಈಗಿನ ವಿದ್ಯಮಾನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಂದು ಸವಾಲೇ ಸರಿ. ಕಲುಷಿತ ವಾತಾವರಣ, ದಿನದಿಮದ ದಿನ ಬದಲಾಗುತ್ತಿರುವ ಹವಾಮಾನ ಇದೆಲ್ಲದರ ಜೊತೆಗೆ ಬೆರಕೆಯುಕ್ತ ಆಹಾರ ಪದಾರ್ಥಗಳು ಹೀಗೆ ಒಂದೇ ಎರಡೇ. ಆದರೆ ಕೆಲವು ಪದಾರ್ಥಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ ನಾವು ತಕ್ಕಮಟ್ಟಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾದರೆ ಆ ಆಹಾರ ಪದಾರ್ಥಗಳು ಯಾವುವು ಎಂಬುದನ್ನು ನೋಡೋಣ...
* ಸೇಬು:
     ನಮ್ಮ ಹಳಬರು ದಿನಕ್ಕೊಂದು ಸೇಬು ತಿನ್ನಿ ವೈದ್ಯರಿಂದ ದೂರವಿರಿ ಎಂದು ಹೇಳಿರುವ ಮಾತು ಅಕ್ಷರಶಃ ಸತ್ಯ. ಸೇಬು ಒಂದು ಪೋಷಕಾಂಶಗಳಿಂದ ಭರಿತವಾದ ಹಣ್ಣು. ಸೇಬಿನಲ್ಲಿ ಕಬ್ಬಿಣ, ಮೆಗ್ನಿಶಿಯಂ ಮತ್ತು ವಿಟಾಮಿನ್ ಸಿ ಅಂಶಗಳಿವೆ. ಅಷ್ಟೇ ಅಲ್ಲದೇ ದೇಹದಲ್ಲಿನ ಸಕ್ಕರೆ ಅಂಶವು ದಿಡೀರ್ ಆಗಿ ಹೆಚ್ಚುವುದನ್ನು ಸೇಬು ಹಣ್ಣು ತಡೆಯುತ್ತದೆ. ಮತ್ತು ಕೊಲೆಸ್ಟ್ರಾಲ್ ಅನ್ನು ತಗ್ಗಿಸುವುದಲ್ಲದೇ ಶ್ವಾಸಕೋಶಗಳ ಆರೋಗ್ಯವನ್ನು ವೃದ್ಧಿಸುತ್ತದೆ.
 
* ಮೊಟ್ಟೆಗಳು:
      ಮೊಟ್ಟೆಯೂ ಸಹ ಪೋಷಕಾಂಶಭರಿತ ಆಹಾರ. ಇದರಲ್ಲಿ ಪ್ರೋಟೀನ್, ಖನಿಜಾಂಶಗಳು, ವಿಟಾಮಿನ್‌ಗಳು ಸಮೃದ್ಧವಾಗಿವೆ. ಒಂದು ಮೊಟ್ಟೆಯು 75-76 ಕಿಲೋ ಕ್ಯಾಲರಿ ಶಕ್ತಿಯನ್ನು ಒದಗಿಸುತ್ತದೆ. ಮೊಟ್ಟೆಯ ಬಿಳಿಭಾಗದಲ್ಲಿ ಸ್ವಲ್ಪ ಅಂಶ ರಿಬೊಪ್ಲಾವಿನ್, ಝಿಂಕ್ ಮತ್ತು ಅಯೋಡಿನ್‌ಗಳಿವೆ. ವಿಶೇಷವೆಂದರೆ ಮೊಟ್ಟೆಯಲ್ಲಿ ಇತರ ಪಕ್ಷಿಗಳ ಮೊಟ್ಟೆಗಳಲ್ಲಿರುವ ಖನಿಜಾಂಶ ಮತ್ತು ಕೊಲೆಸ್ಟ್ರಾಲ್‌ಗಿಂತ ಅಧಿಕವಿರುತ್ತದೆ. ಇದರಿಂದ ಮೊಟ್ಟೆಯನ್ನು ಸೇವಿಸಿದರೆ ದೇಹದ ಪ್ರತಿರೋಧಕ ಶಕ್ತಿಯು ವರ್ಧಿಸುವುದಲ್ಲದೇ ಇದರಲ್ಲಿರುವ ಪ್ರೋಟೀನ್ ದೇಹದ ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ. ಇದಲ್ಲದೇ ಕಣ್ಣಿನ ಪೊರೆಯ ಚಿಕಿತ್ಸೆಯಲ್ಲಿ ಸಹಾಯಕವಾಗಿದೆ ಮತ್ತು ಸದೃಢ ಮೂಳೆಗಳ ಬೆಳವಣಿಗೆಗೆ ಮತ್ತು ರಕ್ತವರ್ಧನೆಗೆ ಪ್ರಯೋಜನಕಾರಿಯಾಗಿವೆ.
 
* ಕಾಲಿಫ್ಲವರ್:
   ಕಾಲಿಫ್ಲವರ್‌ನಲ್ಲಿ ಕೆಲವೇ ಕ್ಯಾಲೋರಿಗಳು ಇರುವುದರಿಂದ ಇದನ್ನು ಯಾವುದೇ ಮಿತಿಯಿಲ್ಲದೇ ಸೇವಿಸಬಹುದು. ಇದು ಒಂದು ನಾರಿನಂಶ ತುಂಬಿದ ಪದಾರ್ಥವಾಗಿದೆ. ಕಾಲಿಫ್ಲವರ್‌ಗಳು ಸೋಂಕು ಮತ್ತು ಕ್ಯಾನ್ಸರ್ ವಿರುದ್ಧ ದೇಹಕ್ಕೆ ಸುರಕ್ಷತೆಯನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೇ ಕಾಲಿಫ್ಲವರ್‌ನಲ್ಲಿ ದೇಹಕ್ಕೆ ಬೇಕಾಗುವ ಪೋಲೇಟ್ ಮತ್ತು ವಿಟಾಮಿನ್ ಸಿ ಗಳು ಸಮೃದ್ಧವಾಗಿವೆ. ವಿಶೇಷವಾಗಿ ಇದನ್ನು ಮೂತ್ರಪಿಂಡದ ತೊಂದರೆ ಇರುವವರು ಮಿತವಾಗಿ ಉಪಯೋಗಿಸಬೇಕು.
 
* ಸಾಲ್ಮನ್ ಮೀನು:
   ಸಾಲ್ಮನ್ ಮೀನು ಪ್ರೋಟೀನ್‌ನಿಂದ ಸಮೃದ್ಧವಾಗಿದೆ. ಈ ಮೀನು ವಾರಕ್ಕೆ ಎರಡು ಬಾರಿ ಸೇವಿಸದರೆ ಒಳ್ಳೆಯದು ಎಂದು ಹೇಳುವ ಮೀನಿನ ವರ್ಗಕ್ಕೆ ಸೇರಿದ್ದಾಗಿದೆ. ದೇಹಕ್ಕೆ ಅವಶ್ಯವಾಗಿ ಬೇಕಾಗುವ ಪ್ರೋಟೀನ್ ಮತ್ತು ಕೊಬ್ಬುಗಳೆರಡೂ ಸಾಲ್ಮನ್ ಮೀನಿನಲ್ಲಿದೆ ಮ್ತತು ಸಾಲ್ಮನ್ ಮೀನಿನಲ್ಲಿ ಒಮೇಗಾ 3 ಅಂಶವು ಇರುವುದರಿಂದ ಇದು ಉರಿಯೂತವನ್ನು ತಗ್ಗಿಸುತ್ತದೆ. ಸಾಲ್ಮನ್ ಮೀನು ಆರೋಗ್ಯಕರ ಕೊಬ್ಬನ್ನು ಹೊಂದಿರುವುದಷ್ಟೇ ಅಲ್ಲದೇ ಕೆಲವು ಕರಗುವ ವಿಟಾಮಿನ್‌ಗಳನ್ನೂ ಸಹ ಹೊಂದಿದೆ. ಇವುಗಳು ರಕ್ತದಲ್ಲಿರುವ ಪಾಸ್ಪರಸ್ ಮತ್ತು ಕ್ಯಾಲ್ಸಿಯಂ ಮಟ್ಟವನ್ನು ನಿರ್ವಹಿಸಲು ಅವಶ್ಯಕವಾಗಿದೆ.
 
* ಬೀನ್ಸ್ (ಅವರೆಕಾಳು):
      ಬೀನ್ಸ್‌ನಲ್ಲಿ ಹೆಚ್ಚು ನಾರಿನಂಶವಿದ್ದು ಅದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.  ಅವರೆಕಾಳಿನಲ್ಲಿ ನ್ಯಾಚುರೇಟೆಡ್ ಕೊಬ್ಬು ಕಡಿಮೆ ಇರುತ್ತದೆ. ಇವುಗಳು ವಿಟಾಮಿನ್ ಬಿ, ಅಮಿನೋ ಆಸಿಡ್‌ಗಳು, ಆಂಟಿ ಆಸಿಡ್‌ನಿಂದ ಸಮೃದ್ಧವಾಗಿದ್ದು ಇದು ಮೆದುಳಿನ ಚಟುವಟಿಕೆಗಳನ್ನು ಸಂರಕ್ಷಿಸುತ್ತದೆ. ಇದರಲ್ಲಿರುವ ನಾರಿನಂಶವು ಗ್ಲುಕೋಸ್ ಹೀರುವಿಕೆಯನ್ನು ನಿಧಾನಗೊಳಿಸುತ್ತದೆ. ಮ್ತತು ಮಲಬದ್ಧತೆಯ ನಿವಾರಣೆಗೆ ಸಹಕರಿಸುತ್ತದೆ. ಅವರೆಕಾಳುಗಳು ನಮ್ಮ ಜಠರ, ಅನ್ನನಾಳವ್ಯೂಹವನ್ನು ಆರೋಗ್ಯಕರವಾಗಿ ಇರಿಸುತ್ತದೆ. ಅದಲ್ಲದೇ ಅವರೆಕಾಳು ಕರಗುವಂತ ನಾರಿನಂಶವಾಗಿದ್ದು, ರಕ್ತದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಇದರಿಂದ ಮೆಟಬಾಲಿಸಂ ನಿಯಂತ್ರಣಕ್ಕೆ ಬರುವುದಲ್ಲದೇ ತೂಕ ನಿರ್ವಹಣೆಯು ಸುಲಭವಾಗುತ್ತದೆ. 
 
* ಬಾರ್ಲಿ:
       ಬಾರ್ಲಿಯಲ್ಲಿ ಬೀಟಾ ಗುಟೇನ್ ಎಂದು ಕರೆಯಲಾಗುವ ಕರಗುವಂತಹ ನಾರು ಸಮೃದ್ಧಿಯಾಗರುತ್ತದೆ. ಬಾರ್ಲಿಯು 2 ಗ್ರಾಂಗಳಷ್ಟು ನಾರಿನಂಶವನ್ನು ಒದಗಿಸುತ್ತದೆ. ಇದು ಗುದನಾಳ ಮತ್ತು ಕರುಳನ್ನು ಆರೋಗ್ಯಕರವಾಗಿ ಇರಿಸಲು ಸಹಾಯ ಮಾಡುತ್ತದೆ. ಪಿತ್ತಕೋಶದ ಕಲ್ಲುಗಳಾಗುವುದನ್ನು ತಡೆಯುತ್ತದೆ ಮತ್ತು ದೇಹದ ಪ್ರತಿರೋಧಕ ಶಕ್ತಿಯನ್ನು ವರ್ಧಿಸುತ್ತದೆ.
 
* ಖರ್ಜೂರಗಳು:
    ಖರ್ಜೂರಗಳಲ್ಲಿ ಖನಿಜಗಳಾದ ಪೊಟ್ಯಾಷಿಯಂ, ಮೆಗ್ನಿಷಿಯಂ, ಸೆಲೆನಿಯಂ ಮತ್ತು ಕ್ಯಾಲ್ಸಿಯಂಗಳು ಹೇರಳ ಪ್ರಮಾಣದಲ್ಲಿ ಇರುತ್ತವೆ. ಖರ್ಜೂರಗಳು ಆಂಟಿ ಆಕ್ಸಿಡಾಂಟ್‌, ಕ್ಯಾರೋಟಿನಾಯಿಡ್‌ ಹೊಂದಿದ್ದು, ಖರ್ಜೂರಗಳಲ್ಲಿ ಅಧಿಕ ನಾರಿನ ಅಂಶಗಳಿವೆ. ದೇಹದಲ್ಲಿನ ವಿಷ ವಸ್ತುಗಳನ್ನು ಹೊರಹಾಕುವಲ್ಲಿ ನಾರಿನ ಅಂಶವು ಬಹಳ ಆವಶ್ಯಕ. ಇದರಿಂದ ಗುದನಾಳದ ಕ್ಯಾನ್ಸರೂ ಸೇರಿದಂತೆ, ಜೀರ್ಣಾಂಗಗಳಿಗೆ ಸಂಬಂಧಿಸಿದ ಅನೇಕ ಅಸಹಜತೆಗಳು ಕಡಿಮೆಯಾಗುತ್ತವೆ. ಇದರಲ್ಲಿ ಕ್ಯಾಲೊರಿಯೂ ಸಹ ಅಧಿಕವಿದೆ. ಒಂದು ಕಪ್‌ ಖರ್ಜೂರದಲ್ಲಿ 400 ಕ್ಯಾಲೊರಿಗಳಿವೆ. 
 
ಹೀಗೆ ನಾವು ಆದಷ್ಟು ಪೌಷ್ಟಿಕಾಂಶಯುಕ್ತ, ಪ್ರೋಟೀನ್ ಸಮೃದ್ಧ ಆಹಾರವನ್ನು ನಮ್ಮ ದೈನಂದಿನ ಆಹಾರ ಪದಾರ್ಥದಲ್ಲಿ ಅಳವಡಿಸಿಕೊಂಡರೆ ಉತ್ತಮವಾದ ಆರೋಗ್ಯವನ್ನು ನಾವು ಹೊಂದಬಹುದು,

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments