Publish Date: Fri, 22 Mar 2019 (19:45 IST)
Updated Date: Fri, 22 Mar 2019 (19:48 IST)
ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ರಾಗಿ 1 ಕಪ್
* ಬೆಲ್ಲ 1 ಕಪ್
* ಏಲಕ್ಕಿ ಪುಡಿ 1/2 ಟೀ ಚಮಚ
* ಮೈದಾ ಹಿಟ್ಟು ಒಂದೂವರೆ ಕಪ್
* ಎಣ್ಣೆ ಸ್ವಲ್ಪ
* ಅರಿಶಿನ ಪುಡಿ 1/2 ಟೀ ಚಮಚ
ತಯಾರಿಸುವ ವಿಧಾನ:
ಮೊದಲು ರಾಗಿಯನ್ನು ಚೆನ್ನಾಗಿ ತೊಳೆದು ನೆರಳಿನಲ್ಲಿ ಆರಿಸಿ ಹಿಟ್ಟು ಮಾಡಿಟ್ಟುಕೊಳ್ಳಬೇಕು. ನಂತರ ಹಿಟ್ಟನ್ನು ತೆಳು ಕಾಟನ್ ಬಟ್ಟೆಯಲ್ಲಿ ಹಾಕಿ ಸೋಸಿಕೊಳ್ಳಬೇಕು. ನಂತರ ಒಂದು ಪಾತ್ರೆಗೆ ಸ್ವಲ್ಪ ನೀರು ಮತ್ತು ಬೆಲ್ಲವನ್ನು ಹಾಕಿ ಕಾಯಲು ಇಟ್ಟು ಬೆಲ್ಲವು ಕರಗಿದ ನಂತರ ಸೋಸಿ ಮತ್ತೆ ಕುದಿಯಲು ಇಡಬೇಕು. ನಂತರ ರಾಗಿ ಹಿಟ್ಟು, ಏಲಕ್ಕಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಿಕೊಂಡು ಅದು ಬೆಂದ ಮೇಲೆ ಆರಲು ಬಿಟ್ಟು ಚೆನ್ನಾಗಿ ಮಿದ್ದಿ ಹೂರಣ ರೆಡಿ ಮಾಡಿಕೊಳ್ಳಬೇಕು.
ನಂತರ ಮೈದಾ ಹಿಟ್ಟಿಗೆ ಸ್ವಲ್ಪ ಎಣ್ಣೆ, ಅರಿಶಿನ ಪುಡಿ ನೀರನ್ನು ಹಾಕಿ ಕಲೆಸಿ 1/2 ಗಂಟೆ ನೆನೆಯಲು ಬಿಟ್ಟರೆ ಕಣಕವು ಸಿದ್ಧವಾಗುತ್ತದೆ. ನಂತರ ರಾಗಿ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಕಣಕದಲ್ಲಿಟ್ಟು ಹೋಳಿಗೆಯನ್ನು ಲಟ್ಟಿಸಿ ಅದರ ಎರಡೂ ಬದಿಗೆ ಎಣ್ಣೆಯನ್ನು ಹಚ್ಚಿ ಬೇಯಿಸಿದರೆ ರಾಗಿ ಹೋಳಿಗೆ ಸವಿಯಲು ಸಿದ್ಧ.