ಬೆಂಗಳೂರು: ಮದುವೆಯಾದರೂ ಬ್ರಹ್ಮಚಾರಿಗಳಂತೇ ಜೀವನ ಮಾಡುವ ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಮದುವೆಯಾದ ಮೇಲೂ ಪತ್ನಿಯ  ಜತೆಗೆ ದೈಹಿಕ ಸಂಬಂಧ ಬೆಳೆಸದ ಪತಿಗೆ ಏನು ಮಾಡೋದು?
									
										
								
																	
ಭಾರತೀಯ ಸಂಪ್ರದಾಯಸ್ಥ ಹೆಣ್ಣು ಮಕ್ಕಳು ಈ ವಿಚಾರವನ್ನು ನೇರವಾಗಿ ಗಂಡನ ಜತೆ ಕೇಳಲು ಸಂಕೋಚ ಪಡುತ್ತಾರೆ. ಆದರೆ ದಾಂಪತ್ಯಕ್ಕೆ ಇದುವೇ ಅಲ್ಲವೇ ಮುಖ್ಯ ಸೇತುವೆ?
									
			
			 
 			
 
 			
					
			        							
								
																	ಇಂತಹ ಸಂದರ್ಭದಲ್ಲಿ ಪತಿ ಸಂತೋಷವಾಗಿರುವ ಸಮಯದಲ್ಲಿ ಆತನೊಂದಿಗೆ ಮಾತನಾಡಿ. ಆದರೆ ಅದು ಆತನನ್ನು ದೂರುವಂತೆ, ಸಿಟ್ಟಿಗೇಳಿಸುವಂತೆ ಇರಬಾರದು. ಮೃದುವಾಗಿ ಕೇಳಿ. ಯಾಕೆ ಈ ರೀತಿ ಮಾಡಲು ಕಾರಣವೇನೆಂದು ಕೆದಕಿ.
									
										
								
																	ಬಹುಶಃ ಆತನಿಗೆ ತನ್ನ ದೇಹ ಸಾಮರ್ಥ್ಯದ ಮೇಲೆ ಕೀಳರಿಮೆಯಿಂದ ಈ ರೀತಿ ಮಾಡಬಹುದು. ಹಾಗಿರುವಾಗ ಅದು ಮುಖ್ಯವಲ್ಲವೆಂದು ಮನದಟ್ಟು ಮಾಡಿಸಿ. ಇಬ್ಬರೂ ಸಂತೋಷವಾಗಿರಲು ದೈಹಿಕ ಸಂಬಂಧ ಎಷ್ಟು ಮುಖ್ಯ, ಆತನ ಅಗತ್ಯ ನಿಮಗೆಷ್ಟಿದೆ ಎಂದು ಅರ್ಥ ಮಾಡಿಸಿ.
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ