Webdunia - Bharat's app for daily news and videos

Install App

ಸ್ವಾದಿಷ್ಠ ಸೀಗಡಿ ಟಿಕ್ಕಾ

ಅತಿಥಾ
ಗುರುವಾರ, 25 ಜನವರಿ 2018 (17:40 IST)
ಬೇಕಾಗುವ ಸಾಮಗ್ರಿಗಳು -
 
ಸ್ವಚ್ಛಗೊಳಿಸ ಸೀಗಡಿ ಮೀನು - 1 ಕಪ್
ನಿಂಬೆ ಹಣ್ಣು - 1
ಉಪ್ಪು
ಖಾರ ಪುಡಿ - 2 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಚಮಚ
ಮೊಸರು - 1/2 ಕಪ್
ಕ್ರೀಮ್ - 1/4 ಕಪ್
ಚಿಕ್ಕದಾಗಿ ಹೆಚ್ಚಿದ ಈರುಳ್ಳಿ - 1
3 ಟೊಮೆಟೊ ಹಣ್ಣಿನ ರಸ / ಪ್ಯೂರಿ
ಅರಿಶಿನ -1/2 ಚಮಚ
ಜೀರಿಗೆ - 1 ಚಮಚ
ಗರಂ ಮಸಾಲಾ ಪುಡಿ - 1 ಚಮಚ
ಬೆಣ್ಣೆ - 1 ಚಮಚ
ಎಣ್ಣೆ - 2 ಚಮಚ
ತಂದೂರಿ ಮಸಾಲಾ ಪುಡಿ(ಐಚ್ಛಿಕ)
ಮಾಡುವ ವಿಧಾನ -
 
- ಒಂದು ಪಾತ್ರೆಯಲ್ಲಿ ಸೀಗಡಿ, ಉಪ್ಪು, ಖಾರ ಪುಡಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಮಿಶ್ರಣ ಮಾಡಿ 15-20 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ.
- ಒಂದು ಪ್ಯಾನ್‌ನಲ್ಲಿ ಬೆಣ್ಣೆ ಹಾಕಿ ಮ್ಯಾರಿನೇಟ್ ಮಾಡಿದ ಸೀಗಡಿಗಳನ್ನು ಸೇರಿಸಿ ಮತ್ತು 4-5 ನಿಮಿಷ ಬೇಯಿಸಿ, ಇನ್ನೊಂದು ಬಟ್ಟಲಿನಲ್ಲಿ ಹಾಕಿ ಪಕ್ಕಕ್ಕೆ ಇರಿಸಿ.
- ಅದೇ ಪ್ಯಾನ್‌ನಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ, ಅದಕ್ಕೆ ಜೀರಿಗೆ, ಹೆಚ್ಚಿದ ಈರುಳ್ಳಿ, ಉಪ್ಪು ಸೇರಿಸಿ 4-5 ನಿಮಿಷಗಳ ಕಾಲ ಹುರಿಯಿರಿ.
- ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರ ಪುಡಿ, ಅರಿಶಿನ ಪುಡಿ, ಉಪ್ಪು ಸೇರಿಸಿ ಸ್ವಲ್ಪ ಹುರಿಯಿರಿ.
- ಅದಕ್ಕೆ ಟೊಮೆಟೊ ಹಣ್ಣಿನ ರಸ / ಪ್ಯೂರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, 3- 4 ನಿಮಿಷಗಳ ಕಾಲ ಮಿಶ್ರಣ ದಪ್ಪವಾಗುವವರೆಗೆ ಬೇಯಿಸಿ. 
- ಅದಕ್ಕೆ ಕ್ರೀಮ್, ಮೊಸರು ಮತ್ತು ಗರಂ ಮಸಾಲಾ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. 
- ಬೇಯಿಸಿದ ಸೀಗಡಿಗಳು, ತಂದೂರಿ ಮಸಾಲಾ ಪುಡಿ ಮತ್ತು ರುಚಿಗೆ ಉಪ್ಪು ಸೇರಿಸಿದರೆ ರುಚಿಕರ ಸೀಗಡಿ ಟಿಕ್ಕಾ ನಾನ್ ಅಥವಾ ರೋಟಿ ಜೊತೆ ಸವಿಯಲು ಸಿದ್ದ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನವೂ ಬಿಸಿಬಿಸಿ ಅನ್ನದ ಜೊತೆ ಉಪ್ಪಿನಕಾಯಿ ತಿನ್ನುತ್ತಿದ್ದರೆ ಏನಾಗುತ್ತದೆ ಗೊತ್ತಾ

ಮಳೆಗಾಲದಲ್ಲೂ ಫಿಟ್ನೆಸ್ ಕಾಪಾಡಲು ಇಲ್ಲಿದೆ ಕೆಲ ಸರಳ ವಿಧಾನಗಳು

ಫ್ಯಾಟಿ ಲಿವರ್ ಇದ್ರೆ ನಿಮಗೆ ಈ ಅನುಭವವಾಗುತ್ತದೆ..ಏನು ಮಾಡಬೇಕು ಇಲ್ಲಿ ನೋಡಿ ವಿವರ

ಎಲ್ಲರೂ ಇಷ್ಟಪಟ್ಟು ತಿನ್ನುವ ರಾಂಬೂಟನ್ ಹಣ್ಣಿನ ಆರೋಗ್ಯ ಪ್ರಯೋಜನ ಇಲ್ಲಿದೆ

ರಾತ್ರಿ ನಿದ್ರೆ ಬರುವವರೆಗೂ ಬೆಡ್ ಮೇಲೆ ಮಲಗಿ ಮೊಬೈಲ್ ನೋಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments