Select Your Language

Notifications

webdunia
webdunia
webdunia
webdunia

ಸ್ವಾದಿಷ್ಠವಾದ ಗೋಡಂಬಿ ಬರ್ಫಿ

ಸ್ವಾದಿಷ್ಠವಾದ ಗೋಡಂಬಿ ಬರ್ಫಿ
ಬೆಂಗಳೂರು , ಬುಧವಾರ, 13 ಮಾರ್ಚ್ 2019 (14:14 IST)
ಸಿಹಿತಿಂಡಿಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲಿಯೂ ಸುಲಭವಾಗಿ ರುಚಿಕರವಾಗಿ ಮಾಡುವ ತಿನಿಸುಗಳೆಂದರೆ ಎಲ್ಲಾ ವಯಸ್ಸಿನವರೂ ಇಷ್ಟಪಟ್ಟು ತಿನ್ನುತ್ತಾರೆ. ಅಂತಹ ಸಿಹಿ ಪದಾರ್ಥಗಳ ಪಟ್ಟಿಗೆ ಗೋಡಂಬಿ ಬರ್ಫಿಯೂ ಸೇರುತ್ತದೆ ಎಂದರೆ ತಪ್ಪೇನಿಲ್ಲ. ಈ ಬರ್ಫಿಯನ್ನು ಸುಲಭವಾಗಿ ಮನೆಯಲ್ಲಿಯೇ ಮಾಡಬಹುದು. 
  ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಗೋಡಂಬಿ 1 ಕಪ್
* ಸಕ್ಕರೆ 1 ಕಪ್
* ತುಪ್ಪ 1 ಚಮಚ
* ನೀರು 1/2 ಕಪ್
 
   ತಯಾರಿಸುವ ವಿಧಾನ:
   ಮೊದಲು ಒಂದು ಕಪ್ ಗೋಡಂಬಿಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ಒಂದು ಕಪ್ ಸಕ್ಕರೆ (ಎಷ್ಟು ಸಿಹಿ ಬೇಕೋ ಅಷ್ಟು) ಹಾಕಿ ಅರ್ಧ ಕಪ್‌ನಷ್ಟು ನೀರನ್ನು ಹಾಕಿ ಕರಗಲು ಬಿಡಬೇಕು. ಅದು ಕರಗಿದ ನಂತರ ಅದನ್ನು ಕೈಯಾಡಿಸುತ್ತಲೇ ಈಗಾಗಲೇ ಪುಡಿ ಮಾಡಿಕೊಂಡ ಗೋಡಂಬಿಯನ್ನು ಸೇರಿಸಬೇಕು. ಅದು ಗಟ್ಟಿಯಾಗುತ್ತಾ ಬಂದಾಗ ಅದಕ್ಕೆ ಒಂದು ಚಮಚ ತುಪ್ಪವನ್ನು ಹಾಕಿ ಉಂಡೆಯ ಹದಕ್ಕೆ ಅದನ್ನು ಮಾಡಿಕೊಳ್ಳಬೇಕು. ನಂತರ ಈ ಮಿಶ್ರಣವನ್ನು ಮಣೆಯ ಮೇಲೋ ಅಥವಾ ತುಪ್ಪ ಸವರಿದ ತಟ್ಟೆಯ ಮೇಲೋ ಸ್ವಲ್ವ ಉಂಡೆಯ ತರಹ ಮಾಡಿ ತೆಳ್ಳಗೆ ಲಟ್ಟಿಸಿಕೊಳ್ಳಬೇಕು. (ನಿಮಗೆ ಬೇಕಾದ ಆಕಾರದಲ್ಲಿ ಲಟ್ಟಿಸಬಹುದು) ಈಗ ರುಚಿಯಾದ ಗೋಡಂಬಿ ಬರ್ಫಿ ಸವಿಯಲು ಸಿದ್ಧ. ಸಾಯಂಕಾಲದ ಸಮಯ ಮಕ್ಕಳಿಗೆ ಸ್ನ್ಯಾಕ್ಸ್ ರೂಪದಲ್ಲಿಯೂ ಮಾಡಿಕೊಡಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಗೇರುಕಾಯಿ ಚಟ್ನಿ