Publish Date: Wed, 13 Mar 2019 (14:10 IST)
Updated Date: Wed, 13 Mar 2019 (14:12 IST)
ಆಯಾಯ ಕಾಲಕ್ಕೆ ತಕ್ಕಂತೆ ಆಯಾಯ ಹಣ್ಣು ತರಕಾರಿಗಳನ್ನು ಪೃಕೃತಿಯು ಒದಗಿಸುತ್ತದೆ. ಅಂತಹ ವರ್ಗಕ್ಕೆ ಗೇರುಹಣ್ಣು ಕೂಡಾ ಸೇರುತ್ತದೆ. ಬೇಸಿಗೆಕಾಲದಲ್ಲಿ ಸಾಮಾನ್ಯವಾಗಿ ಗೇರುಹಣ್ಣುಗಳನ್ನು ಕಾಣಸಿಗುತ್ತವೆ. ಗೇರು ಹಣ್ಣು ಅತ್ಯಂತ ಬೇಡಿಕೆಯಲ್ಲಿರುವ ಹಣ್ಣು. ಅದರ ಬೀಜಗಳು ದುಬಾರಿಯಾದರೂ ಬಹುಬೇಡಿಕೆಯದ್ದಾಗಿದೆ ಗೇರುಹಣ್ಣಿನ ಬೀಜಕ್ಕೆ ಗೋಡಂಬಿ ಎಂತಲೂ ನಾವು ಕರೆಯುತ್ತೇವೆ. ಹಾಗಾದರೆ ಗೇರುಕಾಯಿಯ ಚಟ್ನಿಯನ್ನು ಹೇಗೆ ತಯಾರಿಸುವುದು ಎಂಬುದನ್ನು ನೋಡೋಣ
ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಹಣ್ಣಾಗದ ಗೇರುಕಾಯಿ
* ಹಸಿಮೆಣಸು ಸ್ವಲ್ಪ
* ಧನಿಯಾ ಕಾಳುಗಳು 8 ರಿಂದ 10
* ಕರಿಬೇವು
* ಕಾಯಿತುರಿ 1 ಹಿಡಿ
* ಹುಣಸೆಹಣ್ಣು
* ಸಾಸಿವೆ
* ಕಡ್ಲೆಬೇಳೆ
* ಉದ್ದಿನಬೇಳೆ
* ಇಂಗು
* ಒಣಮೆಣಸು
* ಕೊಬ್ಬರಿ ಎಣ್ಣೆ
* ಉಪ್ಪು
ತಯಾರಿಸುವ ವಿಧಾನ:
ಮೊದಲು ಹಣ್ಣಾಗದ. ಬಲಿತ ಗೇರುಕಾಯಿಯನ್ನು ತೆಗೆದುಕೊಂಡು ಅದರ ಎರಡೂ ತುದಿಗಳನ್ನು ಕತ್ತರಿಸಿ ತೆಗೆದು ಹೋಳುಗಳನ್ನಾಗಿ ಮಾಡಿಕೊಳ್ಳಬೇಕು. ನಂತರ ಬಾಣಲೆಗೆ ಎಣ್ಣೆಯನ್ನು ಹಾಕಿ ಒಂದೆರಡು ಹಸಿಮೆಣಸು, ಎಂಟರಿಂದ ಹತ್ತು ಧನಿಯಾ ಕಾಳುಗಳು, ಕರಿಬೇವನ್ನು ಹಾಕಿ ಹುರಿದು ಬೇಯಿಸಬೇಕು. ಅದು ತಣ್ಣಗಾದ ನಂತರ ಒಂದು ಹಿಡಿಯಷ್ಟು ಕಾಯಿತುರಿ, ಬಾಡಿಸಿದ ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ನೆಲ್ಲಿಗಾತ್ರದ ಹುಣಸೆಹಣ್ಣನ್ನು ಹಾಕಿ ರುಬ್ಬಬೇಕು. ಅದು ಅರ್ಧ ರುಬ್ಬಿದ ನಂತರ ಬೆಂದ ಗೇರುಹೋಳುಗಳನ್ನು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ನಂತರ ಕೊಬ್ಬರಿ ಎಣ್ಣೆಯಲ್ಲಿ ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಕರಿಬೇವು, ಇಂಗು, ಒಣಮೆಣಸನ್ನು ಹಾಕಿ ಒಗ್ಗರಣೆಯನ್ನು ತಯಾರಿಸಿಕೊಳ್ಳಬೇಕು. ನಂತರ ಎಲ್ಲವನ್ನೂ ಮಿಶ್ರಣ ಮಾಡಬೇಕು. ಇದು ಅನ್ನ, ಚಪಾತಿ, ದೋಸೆ ಹೀಗೆ ಎಲ್ಲದರ ಜೊತ ನೆಂಜಿಕೊಂಡು ತಿನ್ನಲು ರುಚಿಕರವಾಗಿರುತ್ತದೆ.
rajesh patil
Publish Date: Wed, 13 Mar 2019 (14:10 IST)
Updated Date: Wed, 13 Mar 2019 (14:12 IST)