Webdunia - Bharat's app for daily news and videos

Install App

ಬೆಳಗ್ಗಿನ ತಿಂಡಿಗೆ ಮಾಡಿ ಶೇಂಗಾ ಬಾತ್

Webdunia
ಸೋಮವಾರ, 6 ಡಿಸೆಂಬರ್ 2021 (16:19 IST)
ಪ್ರತಿದಿನ ಎಲ್ಲರಿಗೂ ಕಾಡುವ ಪ್ರಶ್ನೆ ಎಂದರೆ ರುಚಿಕರವಾದ ಮತ್ತು ವೈವಿಧ್ಯಮಯವಾದ ತಿಂಡಿ ಏನು ರೆಡೀ ಮಾಡೋದು ಎಂದು ಚಿಂತೆ ಬೇಡ.
ರುಚಿಕರವಾದ ಹೊಸ ರುಚಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈ ಹೊಸ ರುಚಿಯನ್ನು ನೀವು ಕೂಡ ಒಮ್ಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು
 * ಶೇಂಗಾ- ಅರ್ಧ ಕಪ್
* ಕಡಲೆಬೇಳೆ- 1 ಚಮಚ
* ಮೆಣಸು- 1 ಚಮಚ
* ಜೀರಿಗೆ- 1 ಚಮಚ
* ಕರಿಬೇವು ಸ್ವಲ್ಪ
* ಒಣಮೆಣಸಿನಕಾಯಿ- ಮೂರು
* ಅಡುಗೆ ಎಣ್ಣೆ- ಅರ್ಧ ಕಪ್
ಮಾಡುವ ವಿಧಾನ
* ಒಂದು ಬಾಣಲೆಯನ್ನು ಬಿಸಿಗಿಟ್ಟು ಅದಕ್ಕೆ ಮೂರರಿಂದ ನಾಲ್ಕು ಚಮಚ ಎಣ್ಣೆ ಸೇರಿಸಿ ಸಾಸಿವೆ, ಕಡಲೆಬೇಳೆ, ಶೇಂಗಾವನ್ನು ಹುರಿದು ನಂತರ ಪುಡಿ ಮಾಡಿಕೊಂಡಿರಬೇಕು.
* ಅಡುಗೆ ಎಣ್ಣೆ,ಹುರಿದ ಮಸಾಲೆ, ಕರಿಬೇವು, ಒಣಮೆಣಸಿನಕಾಯಿ, ಅರ್ಧ ಚಮಚ ಇಂಗು ಸೇರಿಸಿ ಒಗ್ಗರಣೆ ತಯಾರಿಸಿ.
* ಇದಕ್ಕೆ ಮೊದಲೇ ತಯಾರಿಸಿದ ಅನ್ನವನ್ನು ಸೇರಿಸಿ ಕಾಲು ಚಮಚ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ.
*ಬೇಕಿದ್ದಲ್ಲಿ ಅರ್ಧ ನಿಂಬೆ ರಸ ಸೇರಿಸಿಕೊಳ್ಳಬಹುದು. ಚೆನ್ನಾಗಿ ಕಲೆಸಿದ ನಂತರ ಅನ್ನವನ್ನು 2 ನಿಮಿಷ ಬಿಸಿ ಮಾಡಿದರೆ ರುಚಿಯಾದ ಶೇಂಗಾ ಬಾತ್ ಸವಿಯಲು ಸಿದ್ಧವಾಗುತ್ತದೆ. 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments