Publish Date: Sat, 04 Dec 2021 (10:17 IST)
Updated Date: Sat, 04 Dec 2021 (10:20 IST)
ಬೆಂಗಳೂರು: ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿರುವ ಹಿರಿಯ ನಟ ಎಸ್.ಶಿವರಾಂ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂದು ತಿಳಿದು ಬಂದಿದೆ. ಸದ್ಯದಲ್ಲೇ ವೈದ್ಯರು ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವರಾಂ ಆರೋಗ್ಯದಲ್ಲಿ ಕೊಂಚವೂ ಚೇತರಿಕೆ ಕಂಡುಬಂದಿಲ್ಲ. ಅವರಿಗೆ 84 ವರ್ಷ ವಯಸ್ಸಾಗಿದ್ದು, ಮಿದುಳು ನಿಷ್ಕ್ರಿಯಗೊಂಡಿದೆ. ಈ ಹಂತದಲ್ಲಿ ಶಸ್ತ್ರಚಿಕಿತ್ಸೆ ಕೂಡಾ ಅಸಾಧ‍್ಯ.
ಹೀಗಾಗಿ ಅವರ ಆರೋಗ್ಯದ ಬಗ್ಗೆ ಆತಂಕದ ಸ್ಥಿತಿಯಿದೆ. ಈಗಾಗಲೇ ಚಿತ್ರರಂಗದ ಅನೇಕ ತಾರೆಯರು ಶಿವರಾಂ ಅವರನ್ನು ಆಸ್ಪತ್ರೆಗೆ ಬಂದು ನೋಡಿಕೊಂಡು ಹೋಗಿದ್ದಾರೆ.