Select Your Language

Notifications

webdunia
webdunia
webdunia
webdunia

French Open: ಯಾನಿಕ್‌ ಸಿನ್ನರ್‌- ಕಾರ್ಲೋಸ್‌ ಅಲ್ಕರಾಜ್‌ ಪೈಪೋಟಿಯಲ್ಲಿ ಯಾರಿಗೆ ಒಲಿಯಲಿದೆ ಫ್ರೆಂಚ್‌ ಓಪನ್‌ ಕಿರೀಟ

Italy's Yannick Sinner, Spain's Carlos Alcaraz, French Open Tennis

Sampriya

ಪ್ಯಾರಿಸ್‌ , ಭಾನುವಾರ, 8 ಜೂನ್ 2025 (11:10 IST)
Photo Courtesy X
ಪ್ಯಾರಿಸ್‌: ವಿಶ್ವದ ನಂಬರ್‌ 1 ಆಟಗಾರ ಯಾನಿಕ್‌ ಸಿನ್ನರ್‌ ಮತ್ತು ವಿಶ್ವದ ಎರಡನೇ ರ‍್ಯಾಂಕ್‌ನ ಕಾರ್ಲೋಸ್‌ ಅಲ್ಕರಾಜ್‌ ಇಂದು ಫ್ರೆಂಚ್‌ ಓಪನ್‌ ಟೆನಿಸ್‌ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ಗೆದ್ದವರಿಗೆ ಆಕರ್ಷಕ ಟ್ರೋಫಿಯೊಂದಿಗೆ ₹25 ಕೋಟಿ ಬಹುಮಾನ ಸಿಗಲಿದೆ. 

ಇಟಲಿಯ ಯಾನಿಕ್‌ ಸಿನ್ನರ್‌ ಅವರು ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಸರ್ಬಿಯಾದ ದಿಗ್ಗಜ ನೊವಾಕ್‌ ಜೊಕೊವಿಚ್‌ ಅವರನ್ನು ಮಣಿಸಿ ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿಯ ಫೈನಲ್‌ ತಲುಪಿದರು. ಸ್ಪೇನ್‌ ಅಲ್ಕರಾಜ್‌ ಅವರು ಇಟಲಿಯ ಲೊರೆಂಜೊ ಮುಸೆಟ್ಟಿ ವಿರುದ್ಧ ಗೆದ್ದು ಪ್ರಶಸ್ತಿ ಸುತ್ತು ಪ್ರವೇಶಿಸಿದ್ದರು. 

23 ವರ್ಷ ವಯಸ್ಸಿನ ಸಿನ್ನರ್‌ 6-4, 7-5, 7-6(3)ರಲ್ಲಿ ನೇರ ಸೆಟ್‌ಗಳಿಂದ ಆರನೇ ಶ್ರೇಯಾಂಕದ ಜೊಕೊವಿಚ್‌ ಅವರನ್ನು ಹಿಮ್ಮೆಟ್ಟಿಸಿ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಮೊದಲ ಬಾರಿ ಫೈನಲ್‌ ತಲುಪಿದರು. ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್‌ ಕಿರೀಟದ ನಿರೀಕ್ಷೆಯಲ್ಲಿದ್ದ 38 ವರ್ಷ ವಯಸ್ಸಿನ ಜೊಕೊವಿಚ್‌ಗೆ ನಿರಾಸೆಯಾಯಿತು.

ಗಾಫ್‌ಗೆ ಪ್ರಶಸ್ತಿ: ಸೆಟ್‌ ಹಿನ್ನಡೆಯಿಂದ ಅಮೋಘ ರೀತಿ ಚೇತರಿಸಿಕೊಂಡ ಕೊಕೊ ಗಾಫ್ ಅವರು ಅಗ್ರ ಶ್ರೇಯಾಂಕದ ಅರಿನಾ ಸಬಲೆಂಕಾ ಅವರನ್ನು ಶನಿವಾರ  6-7 (5), 6-2, 6-4 ರಿಂದ ಆಘಾತ ನೀಡಿ ಮೊದಲ ಬಾರಿ ಫ್ರೆಂಚ್‌ ಓಪನ್‌ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.

ಇದು ಅಮೆರಿಕದ ಆಟಗಾರ್ತಿಗೆ ಎರಡನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ. 2015ರಲ್ಲಿ ಸೆರೆನಾ ವಿಲಿಯಮ್ಸ್‌ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಪ್ರಶಸ್ತಿ ಗೆದ್ದ ನಂತರ, ಈ ಸಾಧನೆಗೆ ಪಾತ್ರರಾದ ಅಮೆರಿಕದ ಮೊದಲ ಆಟಗಾರ್ತಿ ಎಂಬ ಹಿರಿಮೆ 21 ವರ್ಷ ವಯಸ್ಸಿನ ಗಾಫ್ ಅವರದಾಯಿತು. 

Share this Story:

Follow Webdunia kannada

ಮುಂದಿನ ಸುದ್ದಿ

IPL 2025: ಆರ್‌ಸಿಬಿಗೆ ಐಪಿಎಲ್‌ ಕಿರೀಟ: ಇಡೀ ಗ್ರಾಮಕ್ಕೆ ಮಾಂಸದೂಟ ಹಾಕಿ ಸಂಭ್ರಮಿಸಿದ ಯುವಕರು