Select Your Language

Notifications

webdunia
webdunia
webdunia
webdunia

ಹೊಸ ತೊಡಕಿಗೆ ಸ್ಪೆಷಲ್ ರೆಸಿಪಿ

ಮಟನ್ ಡ್ರೈ ರೋಸ್ಟ್
ಮಟನ್ನಿಂದ ಮಾಡುವ ಹತ್ತು ಹಲವು ಪದಾರ್ಥಗಳನ್ನು ನೀವು ಸೇವಿಸಿರಬಹುದು.

ಆದರೆ ನಾವು ಇಂದು ಹೇಳಲು ಹೊರಟಿರುವ ಮಟನ್ ಡ್ರೈ ರೋಸ್ಟ್ ನಿಮ್ಮ ಮನೆ ಮಂದಿಗೆ ಎಲ್ಲರಿಗೂ ಇಷ್ಟವಾಗುತ್ತದೆ. ಈ ಖಾದ್ಯ ನಿಮ್ಮ ಬಾಯಿ ರುಚಿ ಹೆಚ್ಚಿಸುವಲ್ಲಿ ಸಂಶಯವಿಲ್ಲ.

ಹಾಗಿದ್ದರೆ ಇನ್ಯಾಕೆ ತಡ ಬನ್ನಿ ಮನೆಯಲ್ಲಿ ಸರಳವಾಗಿ ಮಟನ್ ಡ್ರೈ ರೋಸ್ಟ್ ಹೇಗೆ ಮಾಡುವುದು ಎನ್ನುವುದನ್ನು ನೋಡೋಣ..

ಬೇಕಾಗುವ ಸಾಮಗ್ರಿಗಳು

* ಮಟನ್- 1 ಕೆಜಿ
* ಶುಂಠಿ ಬೆಳ್ಳುಳ್ಳಿ ಪೇಸ್ಟ್-2 ಚಮಚ
* ಮೆಣಸಿನ ಪೌಡರ್-1 ಚಮಚ
* ಅರಿಶಿಣ -1 ಚಮಚ
* ತೆಂಗಿನೆಣ್ಣೆ- ಅರ್ಧ ಕಪ್
* ಕರಿಬೇವು ಸೊಪ್ಪು- ಸ್ವಲ್ಪ
* ತೆಂಗಿನಕಾಯಿ -ಸ್ವಲ್ಪ
* ಹಸಿಮೆಣಸಿನ ಕಾಯಿ-2
* ಈರುಳ್ಳಿ -1
* ದನಿಯಾ ಪೌಡರ್-1 ಚಮಚ
* ಸೋಂಪು- 1 ಚಮಚ
* ಗರಂ ಮಸಾಲ-1 ಚಮಚ
* ಕಾಳುಮೆಣಸಿನ ಪೌಡರ್-1 ಚಮಚ

ಮಾಡುವ ವಿಧಾನ

* ಕುಕ್ಕರ್ಗೆ ಮಟನ್ ಹಾಕಿ ತೆಂಗಿನ ಎಣ್ಣೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಮೆಣಸಿನ ಪೌಡರ್, ಅರಿಸಿಣ ಬೇಕಾದಷ್ಟು ನೀರು ಹಾಕಿ ಬೇಯಿಸಿಕೊಳ್ಳಬೇಕು

* ನಂತರ ಒಂದು ಬಾಣಲೆಗೆ ತೆಂಗಿನೆಣ್ಣೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ಕರಿಬೇವು ಸೊಪ್ಪು, ತೆಂಗಿನಕಾಯಿ, ಹಸಿಮೆಣಸಿನ ಕಾಯಿ, ಇರುಳ್ಳಿ, ಅರಿಶಿಣ, ಮೆಣಸಿನ ಪೌಡರ್, ದನಿಯಾ, ಸೋಂಪುಕಾಳು ಹುಡಿ ಸೇರಿಸಿ ಫ್ರೈ ಮಾಡಿಕೊಳ್ಳಬೇಕು.  

* ನಂತರ ಈ ಪಾತ್ರೆಗೆ ಅದಕ್ಕೆ ಬೇಯಿಸಿದ ಮಟನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಗರಂ ಮಸಾಲೆ, ಕಾಳುಮೆಣಸಿನ ಪೌಡರ್ ಸೇರಿಸಿ ಮಟನ್ ಬೇಯಿಸಿದರೆ ರುಚಿಯಾದ ಮಟನ್ ಡ್ರೈ ರೋಸ್ಟ್ ಸವಿಯಲು ಸಿದ್ಧವಾಗುತ್ತದೆ

Share this Story:

Follow Webdunia kannada

ಮುಂದಿನ ಸುದ್ದಿ

ಉಗುರುಗಳು ದುರ್ಬಲ ವಾಗಲು ಕಾರಣ ಏನು ಗೊತ್ತ? ಇರಲಿ ಎಚ್ಚರ !