Daily Horoscope

Select Your Language

Notifications

webdunia
webdunia
webdunia
webdunia

ಸಖತ್ ಟೇಸ್ಟಿಯಾದ ಚಿಕನ್ ಗೀ ರೋಸ್ಟ್ ಮಾಡಿ

ಚಿಕನ್ ಗೀ ರೋಸ್ಟ್
ನಾನ್ವೆಜ್ ಪ್ರಿಯರ ಲಿಸ್ಟ್ನಲ್ಲಿ ಬರುವ ಮೊದಲ ಹೆಸರು. ಚಿಕನ್ನಿಂದ ಏನೆಲ್ಲಾ ವೆರೈಟಿ ರೆಸಿಪಿಗಳನ್ನು ಮಾಡಬಹುದು ಎಂಬುದಕ್ಕೆ ಲೆಕ್ಕವಿಲ್ಲ.

ನಾವಿಂದು ಮಂಗಳೂರಿನಲ್ಲಿ ಅತ್ಯಂತ ಫೇಮಸ್ ಆಗಿರುವ ಖಾದ್ಯ ಚಿಕನ್ ಗೀ ರೋಸ್ಟ್ ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ವೀಕೆಂಡ್ನಲ್ಲಿ ನೀವಿದನ್ನು ಮನೆಯಲ್ಲಿ ಮಾಡಿ ನೋಡಿ.

ಬೇಕಾಗುವ ಪದಾರ್ಥಗಳು

ಸಣ್ಣ ತುಂಡುಗಳಾಗಿ ಕತ್ತರಿಸಿದ ಚಿಕನ್ ಬ್ರೆಸ್ಟ್ – 1
ಮೊಸರು – 3 ಟೀಸ್ಪೂನ್
ಅರಿಶಿನ ಪುಡಿ – ಅರ್ಧ ಟೀಸ್ಪೂನ್
ನಿಂಬೆ ರಸ – 1 ಟೀಸ್ಪೂನ್
ಕರಿಬೇವಿನ ಎಲೆ – ಕೆಲವು
ಬೆಲ್ಲ – 1 ಟೀಸ್ಪೂನ್
ತುಪ್ಪ – 3 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು

ಮಸಾಲೆ ತಯಾರಿಸಲು

ಒಣ ಕೆಂಪು ಮೆಣಸಿನಕಾಯಿ – 6
ಕರಿಮೆಣಸು – 1 ಟೀಸ್ಪೂನ್
ಲವಂಗ – 2
ಮೆಂತ್ಯ – 1 ಟೀಸ್ಪೂನ್
ಕೊತ್ತಂಬರಿ ಬೀಜ – 2 ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಬೆಳ್ಳುಳ್ಳಿ – 4
ಹುಣಸೆಹಣ್ಣಿನ ಪೇಸ್ಟ್ – 1 ಟೀಸ್ಪೂನ್ 

ಮಾಡುವ ವಿಧಾನ

* ಮೊದಲಿಗೆ ಚಿಕನ್ ಅನ್ನು ಚೆನ್ನಾಗಿ ತೊಳೆದು ನೀರನ್ನು ಸಂಪೂರ್ಣವಾಗಿ ಹರಿಸಿ.
* ಒಂದು ಪಾತ್ರೆಯಲ್ಲಿ ಮೊಸರು, ಅರಿಶಿನ ಹಾಗೂ ನಿಂಬೆ ರಸವನ್ನು ಹಾಕಿ, ಅದಕ್ಕೆ ತೊಳೆದ ಚಿಕನ್ ತುಂಡುಗಳನ್ನು ಸೇರಿಸಿ, ಮಿಶ್ರಣ ಮಾಡಿ. ಕನಿಷ್ಠ 1 ಗಂಟೆ ಈ ಮಿಶ್ರಣಕ್ಕೆ ವಿಶ್ರಾಂತಿ ನೀಡಿ.
* ಈಗ ಒಂದು ಬಾಣಲೆಯನ್ನು ಬಿಸಿ ಮಾಡಿ, ಅದರಲ್ಲಿ ಒಣ ಕೆಂಪು ಮೆಣಸಿನಕಾಯಿ, ಮೆಂತ್ಯ ಬೀಜ, ಜೀರಿಗೆ, ಕೊತ್ತಂಬರಿ, ಲವಂಗ ಮತ್ತು ಕರಿಮೆಣಸು ಹಾಕಿ, ಕಡಿಮೆ ಉರಿಯಲ್ಲಿ ಹುರಿಯಿರಿ.
* ಬಳಿಕ ಸ್ಟೌ ಆಫ್ ಮಾಡಿ, ಮಸಾಲೆ ಪದಾರ್ಥಗಳನ್ನು ಆರಲು ಬಿಡಿ.

* ಮಸಾಲೆ ಪದಾರ್ಥಗಳು ತಣ್ಣಗಾದ ಬಳಿಕ ಮಿಕ್ಸರ್ ಜಾರ್ಗೆ ಹಾಕಿ, ಬೆಳ್ಳುಳ್ಳಿ, ಹುಣಸೆಹಣ್ಣಿನ ಪೇಸ್ಟ್ ಹಾಗೂ 1 ಟೀಸ್ಪೂನ್ ನೀರು ಸೇರಿಸಿ, ನಯವಾದ ಪೇಸ್ಟ್ ತಯಾರಿಸಿ.
* ಈಗ ಒಂದು ಕಡಾಯಿ ತೆಗೆದುಕೊಂಡು, ತುಪ್ಪ ಬಿಸಿ ಮಾಡಿ, ಕರಿಬೇವಿನ ಎಲೆ ಹಾಕಿ ಸಿಡಿಸಿ.
* ಈಗ ಉರಿಯನ್ನು ಕಡಿಮೆ ಮಾಡಿ, ಮೊಸರಿನಲ್ಲಿ ಮ್ಯಾರಿನೇಟ್ ಮಾಡಿದ ಚಿಕನ್ ಅನ್ನು ಕಡಾಯಿಗೆ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ.

* ಈಗ ಮಸಾಲೆ ಪೇಸ್ಟ್ ಅನ್ನು ಕಡಾಯಿಗೆ ಹಾಕಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ತುಪ್ಪ ಚಿಕನ್ನಿಂದ ಬೇರ್ಪಡುವವರೆಗೂ ಬೇಯಿಸಿಕೊಳ್ಳಿ.
* ರುಚಿಗೆ ತಕ್ಕಷು ಉಪ್ಪು ಹಾಗೂ ಬೆಲ್ಲವನ್ನು ಸೇರಿಸಿ ಮಿಶ್ರಣ ಮಾಡಿ.
* ಬೆಲ್ಲ ಕರಗಿದ ಬಳಿಕ ಉರಿಯನ್ನು ಆಫ್ ಮಾಡಿ.
* ಇದೀಗ ಚಿಕನ್ ಗೀ ರೋಸ್ಟ್ ತಯಾರಾಗಿದ್ದು, ಅನ್ನ, ಚಪಾತಿ ಅಥವಾ ನೀರುದೋಸೆಯೊಂದಿಗೆ ಬಿಸಿಬಿಸಿಯಾಗಿ ಬಡಿಸಿ.


Share this Story:

Follow Webdunia kannada

ಮುಂದಿನ ಸುದ್ದಿ

ವಿಜ್ಞಾನ ನಿಮ್ಮ ವಾಟರ್ ಪ್ಯೂರಿಫೈಯರ್‌ಗೆ ಸೇವೆಯ ಅಗತ್ಯವಿದೆ!