Publish Date: Fri, 25 Mar 2022 (09:40 IST)
Updated Date: Fri, 25 Mar 2022 (09:47 IST)
ಚೆನ್ನೈ: ಪ್ರೇಯಸಿಯ ಭೇಟಿಯಾಗಲು ಹೋಗಿದ್ದ 20 ವರ್ಷದ ಯುವಕ ಹೆಣವಾಗಿ ರೈಲ್ವೇ ಟ್ರ್ಯಾಕ್ ಬಳಿ ಪತ್ತೆಯಾಗಿದ್ದಾನೆ.
ಆತನ ಕಾಲು ಮತ್ತು ಕೈ ತುಂಡಾದ ಸ್ಥಿತಿಯಲ್ಲಿದೆ. ವಿದ್ಯಾರ್ಥಿಯಾಗಿರುವ ಯುವಕ ಮುಸ್ಲಿಂ ಧರ್ಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇವರಿಬ್ಬರ ಸಂಬಂಧಕ್ಕೆ ಯುವತಿ ಮನೆಯವರ ವಿರೋಧವಿತ್ತು ಎಂದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಹೀಗಾಗಿ ಈ ಸಾವು ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಯುವಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.