Select Your Language

Notifications

webdunia
webdunia
webdunia
webdunia

ಎರಡು ಬಸ್ ಗಳ ನಡುವೆ ಸಿಲುಕಿಯೂ ಬಚಾವ್ ಆದ ಯುವಕ: ಭಯಾನಕ ವಿಡಿಯೋ ಇಲ್ಲಿದೆ ನೋಡಿ

bus

Krishnaveni K

ಹೈದರಾಬಾದ್ , ಶನಿವಾರ, 4 ಜನವರಿ 2025 (14:08 IST)
ಹೈದರಾಬಾದ್: ಎರಡು ಬಸ್ ಗಳ ನಡುವೆ ಸಿಲುಕಿಯೂ ಯುವಕನೊಬ್ಬ ಅದೃಷ್ಟವಶಾತ್ ಪ್ರಾಣ ರಕ್ಷಿಸಿಕೊಂಡ ಭಯಾನಕ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಓರ್ವ ಯುವಕ ರಸ್ತೆಯ ಒಂದು ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾನೆ. ಈ ವೇಳೆ ಒಂದು ಆತನ ಸಮೀಪದಲ್ಲೇ ಒಂದು ಬಸ್ ಮುಂದೆ ಸಾಗುತ್ತಿರುತ್ತದೆ.

ಆದರೆ ಈ ಬಸ್ ನ್ನು ಓವರ್ ಟೇಕ್ ಮಾಡಲು ಹಿಂದಿನಿಂದ ಬರುವ ಬಸ್ ರಸ್ತೆಯ ಬದಿಗೇ ಹರಿದು ಬರುತ್ತದೆ. ಓವರ್ ಟೇಕ್ ಮಾಡುವ ಭರದಲ್ಲಿ ಚಾಲಕ ನಡೆದಾಡಿಕೊಂಡು ಬರುವ ಯುವಕನನ್ನು ಗಮನಿಸಿಯೇ ಇರುವುದಿಲ್ಲ. ಹೀಗಾಗಿ ಎರಡೂ ಬಸ್ ಗಳ ನಡುವೆ ಯುವಕ ಸಿಲುಕಿಕೊಳ್ಳುತ್ತಾನೆ.

ಎರಡೂ ಬಸ್ ಗಳ ನಡುವೆ ಸಿಲುಕಿಕೊಳ್ಳುವ ಯುವಕ ರಸ್ತೆಯಲ್ಲೇ ಕುಸಿದು ಬೀಳುತ್ತಾನೆ. ಅದೃಷ್ಟವಶಾತ್ ಆತನಿಗೆ ಯಾವುದೇ ಅಪಾಯವಾಗುವುದಿಲ್ಲ. ಕೆಲವು ಕ್ಷಣ ರಸ್ತೆಯಲ್ಲಿ ಬಿದ್ದುಕೊಂಡಿರುವ ಯುವಕ ಬಳಿಕ ಎದ್ದು ನಡೆಯುತ್ತಾನೆ. ಈ ವೇಳೆ ಎರಡೂ ಬಸ್ ನಿಂತಿರುತ್ತದೆ. ಸುತ್ತಲಿದ್ದವರು ಬಸ್ ಚಾಲಕನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಯೋಗೀಶ್ ಗೌಡ ಹತ್ಯೆ ಮಾಡಲು ಶಾಸಕ ವಿನಯ್ ಕುಲಕರ್ಣಿ ಮಾಡಿದ ಮಾಸ್ಟರ್ ಪ್ಲ್ಯಾನ್ ಬಹಿರಂಗ