ಕೊಯಮತ್ತೂರು : ನೀಲ್ ಗ್ರಿಸ್ ನ ಮುದುಮಲೈ ಟೈಗರ್ ರಿಸರ್ವ್ ನ ಸಿಂಗರಾ ಅರಣ್ಯ ಶ್ರೇಣಿಯಲ್ಲಿ ಹುಲಿಗೆ ವಿಷ ನೀಡಿ ಸಾಯಿಸಿದ ಆರೋಪ ಮೇಲೆ ಇಬ್ಬರನ್ನು ತಮಿಳುನಾಡು ಅರಣ್ಯ ಇಲಾಖೆ ಬಂಧಿಸಿದೆ.
7 ವರ್ಷದ ಹುಲಿಯ ಮೃತದೇಹ ಪತ್ತೆಯಾದ ಹಿನ್ನಲೆಯಲ್ಲಿ ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿಯಲ್ಲಿ ಹುಲಿ ಸಾವಿಗೆ ವಿಷದ ಆಹಾರ ಕಾರಣ ಎಂಬುದು ತಿಳಿದುಬಂದಿದೆ. ಬಳಿಕ ಪೊಲೀಸರು ವಿಶೇಷ ತಂಡವನ್ನು ರಚಿಸಿ ಈ ಬಗ್ಗೆ ತನಿಖೆ ನಡೆಸಿದ್ದಾರೆ.
ಆ ವೇಳೆ ನಾಲ್ವರು ತನ್ನ ಹಸುಗಳ ಸಾವಿಗೆ ಕಾರಣವಾದ ಹುಲಿಯ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಹುಲಿಗೆ ಹಸುವಿನ ವಿಷದ ಶವವನ್ನು ನೀಡಿರುವುದಾಗಿ ತಿಳಿದುಬಂದಿದೆ. ಈಗಾಗಲೇ ಇಬ್ಬರನ್ನು ಬಂಧಿಸಿದ ಪೊಲೀಸರು ಮತ್ತಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.