ನವದೆಹಲಿ: ಹೆಸರಿಗೆ ಯೂ ಟ್ಯೂಬರ್. ಆದರೆ ಮಾಡುತ್ತಿದ್ದಿದ್ದು ಭಾರತದ ಮಾಹಿತಿ ಕದ್ದು ಪಾಕಿಸ್ತಾನಕ್ಕೆ ಮಾರುವ ದೇಶ ದ್ರೋಹಿ ಕೆಲಸ. ಇದೀಗ ಯೂ ಟ್ಯೂಬರ್ ಜ್ಯೋತಿ ಮಲ್ಹೋತ್ರಾರನ್ನು ಪೊಲೀಸರು ಬಂಧಿಸಿದ್ದಾರೆ.
ಜ್ಯೋತಿ ಸೇರಿದಂತೆ ಇಂದು ಒಟ್ಟು ಆರು ಮಂದಿಯನ್ನು ಪೊಲೀಸರು ಗೂಢಚರ್ಯ ಮಾಡುತ್ತಿದ್ದ ಆರೋಪದಲ್ಲಿ ಬಂಧಿಸಿದ್ದಾರೆ. ಜ್ಯೋತಿ ಮಿಶ್ರಾ ಯೂ ಟ್ಯೂಬ್ ಚಾನೆಲ್ ಗೆ ರೆಕಾರ್ಡಿಂಗ್ ಮಾಡುವ ನೆಪದಲ್ಲಿ ಭಾರತದ ಸೂಕ್ಷ್ಮ ಪ್ರದೇಶಗಳು, ಧಾರ್ಮಿಕ ಸ್ಥಳಗಳಿಗೆ ತೆರಳಿ ವಿಡಿಯೋ ಮಾಡುತ್ತಿದ್ದಳು.
ಈಕೆಗೆ ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರೊಂದಿಗೆ ಸಂಪರ್ಕವಿರುವುದು ಇದೀಗ ಪತ್ತೆಯಾಗಿದೆ. ಆತನಿಗೆ ಭಾರತದ ಸೂಕ್ಷ್ಮ ಮಾಹಿತಿಗಳನ್ನು ಜ್ಯೋತಿ ಹಂಚಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.
ಜ್ಯೋತಿ ಮೂಲತಃ ಹರ್ಯಾಣದವಳು ಎಂದು ತಿಳಿದುಬಂದಿದೆ. ಟ್ರಾವೆಲ್ ವಿತ್ ಜೋ ಎಂಬ ಯೂ ಟ್ಯೂಬ್ ಚಾನೆಲ್ ಹೊಂದಿದ್ದಾಳೆ. 2023 ರಲ್ಲಿ ಪಾಕಿಸ್ತಾನಿ ವೀಸಾ ಪಡೆದು ಆ ದೇಶಕ್ಕೆ ಭೇಟಿ ನೀಡಿದ್ದ ಆಕೆ ಅಲ್ಲಿನ ಅಧಿಕಾರಿಯೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದಳು ಎಂದು ಆರೋಪಿಸಲಾಗಿದೆ.