Select Your Language

Notifications

webdunia
webdunia
webdunia
webdunia

ಸಾಕ್ಷಿ ಕೇಳುವವರನ್ನು ಪಾಕ್‌ಗೆ ಕಳುಹಿಸಿ: ಕಾಂಗ್ರೆಸ್ ನಾಯಕರ ವಿರುದ್ಧ ಶೋಭಾ ಕರಂದ್ಲಾಜೆ ಆಕ್ರೋಶ

ಶೋಭಾ ಕರಂದ್ಲಾಜೆ

Sampriya

ಬೆಂಗಳೂರು , ಶನಿವಾರ, 17 ಮೇ 2025 (15:53 IST)
Photo Credit X
ಬೆಂಗಳೂರು: ಪಾಕಿಸ್ತಾನದ ವಿರುದ್ಧದ ಆಪರೇಷನ್ ಸಿಂಧೂರದ ಬಗ್ಗೆ ಪ್ರಶ್ನೆ ಮಾಡುವ ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ಅವರು ಪಾಕಿಸ್ತಾನ ಪ್ರವಾಸ ಭಾಗ್ಯ ಕರುಣಿಸಲಿ. ಇದರಿಂದ ಕೈ ನಾಯಕರು ಪಾಕ್‌ಗೆ ತೆರಳಿ ಸಾಕ್ಷಿ ಸಂಗ್ರಹ ಮ ಮಾಡಿಕೊಂಡು ಬರಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್ ಶಾಸಕ ಕೊತ್ತನೂರು ಮಂಜುನಾಥ್, ಸಚಿವರಾದ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಹೇಳಿಕೆಗಳಿಗೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪಾಕಿಸ್ತಾನ ವಿರುದ್ಧ ನಮ್ಮ ಸೈನಿಕರು ಹೋರಾಟ ಮಾಡಿದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ನಿಲುವು ಏನು ಎಂದು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟಪಡಿಸಬೇಕು. ಮಲ್ಲಿಕಾರ್ಜುನ ಖರ್ಗೆ ನಾವು ಬೆಂಬಲ ಕೊಡುತ್ತೇವೆ ಅಂದರು. ಸರ್ಕಾರದ ಎಲ್ಲಾ ನಿರ್ಧಾರಕ್ಕೆ ಸಹಕಾರ ಕೊಡುತ್ತೇವೆ ಅಂದರು. ಈಗ ಬೇರೆ ಬೇರೆ ರಾಜ್ಯದಲ್ಲಿ, ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಬೇರೆ ಬೇರೆ ಹೇಳಿಕೆಗಳನ್ನ ಕೊಡುತ್ತಿದ್ದಾರೆ. ಈ ಹೇಳಿಕೆಗಳು ಹೈಕಮಾಂಡ್ ಸೂಚನೆ ಮೇರೆಗೆ ಬರುತ್ತಿದೆಯಾ ಎಂದು ಪ್ರಶ್ನೆ ಮಾಡಿದರು.

ಪಾಕಿಸ್ತಾನದಲ್ಲಿ ಅಡಗಿ ಕುಳಿತಿದ್ದ ಭಯೋತ್ಪಾದಕರ ತರಬೇತಿ ಕೇಂದ್ರಗಳನ್ನು ಭಾರತ ಸೇನೆ ಹೊಡೆದುರುಳಿಸಿದೆ.  ಅವರ ಕುಟುಂಬಕ್ಕೆ ಪಾಕ್‌ ಸರ್ಕಾರ ಹಣ ನೀಡಿದೆ. ಆದರೆ ಕಾಂಗ್ರೆಸ್ ಮಾತ್ರ ಸಾಕ್ಷಿ ಕೇಳುವ ಮೂಲಕ ನಮ್ಮ ಸೈನಿಕರನ್ನ ಅವಮಾನಿಸುತ್ತಿದೆ ಎಂದರು.  

ಹಿಂದೆ ಸರ್ಜಿಕಲ್ ಸ್ಟ್ರೈಕ್‌ಗೂ ಸಾಕ್ಷಿ ಕೇಳಿದ್ದರು. ಈಗ ಆಪರೇಷನ್ ಸಿಂಧೂರಕ್ಕೂ ಸಾಕ್ಷಿ ಕೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸಬೇಕು. ಇಲ್ಲದೇ ಹೋದರೆ ಅವರ ನಾಯಕರಿಗೆ ಪಾಕಿಸ್ತಾನ ಪ್ರವಾಸ ಭಾಗ್ಯ ಕೊಡಿ. ಸಾಕ್ಷಿ ಕೇಳೋರನ್ನ ಪಾಕಿಸ್ತಾನಕ್ಕೆ ಕಳಿಸಿ. ಅನುಭವ ಪಡೆದು ಬರಲಿ ಎಂದು ಹರಿಹಾಯ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ 92ನೇ ಹುಟ್ಟುಹಬ್ಬವನ್ನು ಆಚರಿಸಲಿರುವ ದೇವೇಗೌಡರಿಗೆ ಸರ್ಪ್ರೈಸ್ ನೀಡಿದ ಏರ್‌ ಇಂಡಿಯಾ ಸಿಬ್ಬಂದಿ