Select Your Language

Notifications

webdunia
webdunia
webdunia
webdunia

ವಾಯುವ್ಯ ಭಾರತಕ್ಕೆ ಹಳದಿ ಎಚ್ಚರಿಕೆ!

ವಾಯುವ್ಯ ಭಾರತಕ್ಕೆ ಹಳದಿ ಎಚ್ಚರಿಕೆ!
ನವದೆಹಲಿ , ಶನಿವಾರ, 7 ಮೇ 2022 (07:15 IST)
ದೇಶಾದ್ಯಂತ ಬಿಸಿಗಾಳಿ ತಗ್ಗಿದ ಬೆನ್ನಲ್ಲೇ ಪಶ್ಚಿಮದ ವಾತಾವರಣ ಬದಲಾವಣೆಯಿಂದಾಗಿ ಹವಾಮಾನ ಇಲಾಖೆ ವಾಯುವ್ಯ ಭಾರತಕ್ಕೆ ‘ಹಳದಿ ಎಚ್ಚರಿಕೆಯನ್ನು ನೀಡಿದೆ.
 
ದೆಹಲಿ, ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಬಿಸಿಗಾಳಿ ಸದ್ಯದಲ್ಲೇ ಅಂತ್ಯವಾಗಲಿದೆ. ಆದರೆ ರಾಜಸ್ಥಾನ ಮತ್ತು ವಿದರ್ಭ ಭಾಗಗಳಲ್ಲಿ ಬಿಸಿಗಾಳಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ.

‘ಗಂಭೀರವಾದ ಬಿಸಿಗಾಳಿ ದೇಶಾದ್ಯಂತ ಕಡಿಮೆಯಾಗಿದೆ. ನಾವು ಮುನ್ಸೂಚನೆ ನೀಡಿದಂತೆ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಏ.30ಕ್ಕೆ ಬಿಸಿಗಾಳಿ ಮುಗಿದಿದೆ. ಇನ್ನೆರಡು ದಿನಗಳಲ್ಲಿ ಈ ಭಾಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಗಳಿವೆ. ಅದೇ ರೀತಿ ಪಶ್ಚಿಮದ ಕ್ಷೋಭೆ ಇರುವುದರಿಂದ ವಾಯುವ್ಯ ಭಾರತದಲ್ಲಿ ಬಿಸಿಗಾಳಿ ಮುಂದುವರೆಯುವ ಸಾಧ್ಯತೆ ಇದೆ.

ಹಾಗಾಗಿ ಹಳದಿ ಎಚ್ಚರಿಕೆ ನೀಡಿದ್ದೇವೆ. ಮೇ 3ರಂದು ದೆಹಲಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಪಶ್ಚಿಮದ ಕ್ಷೋಭೆಯಿಂದಾಗಿ ದೆಹಲಿ, ಲಖನೌ ಮತ್ತು ಜೈಪುರಗಳಲಿ ಭಾರಿ ಮಾರುತಗಳು ಬೀಸಲಿವೆ. ಇದೇ ಸ್ಥಿತಿ ಮುಂದಿನ 6ರಿಂದ 7 ದಿನಗಳ ಕಾಲ ಮುಂದುವರೆಯಲಿದೆ.

ಪೂರ್ವ ಮಾರುತಗಳು ಸಹ ಬಲವಾಗಿರುವುದರಿಂದ ಉಷ್ಣಾಂಶದಲ್ಲಿ ಯಾವುದೇ ಏರಿಕೆಯಾಗುವ ಸಾಧ್ಯತೆ ಇಲ್ಲ. ಸದ್ಯಕ್ಕೆ ಮೇ 7ರವರೆಗೆ ಬಿಸಿಗಾಳಿ ಸೃಷ್ಟಿಯಾಗುವ ಲಕ್ಷಣಗಳಿಲ್ಲ. ನಂತರದ ದಿನಗಳ ಪರಿಸ್ಥಿತಿಯನ್ನು ಉಷ್ಣಾಂಶ ಆಧರಿಸಿ ನಿರ್ಣಯಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಕರನ ತೋಟದಲ್ಲಿ ಪ್ರಾಣ ಬಿಟ್ಟ ಪ್ರೇಯಸಿ