Select Your Language

Notifications

webdunia
webdunia
webdunia
webdunia

ಅಬ್ಬಾ.. ಆಶ್ಚರ್ಯವೆನಿಸಿದರೂ ಸತ್ಯ : 27 ಯುವಕರನ್ನ ಮದುವೆಯಾಗಿ ವಂಚಿಸಿ ಖತರ್ನಾಕ್ ಲೇಡಿ ಎಸ್ಕೇಪ್!

ಅಬ್ಬಾ.. ಆಶ್ಚರ್ಯವೆನಿಸಿದರೂ ಸತ್ಯ : 27 ಯುವಕರನ್ನ ಮದುವೆಯಾಗಿ ವಂಚಿಸಿ ಖತರ್ನಾಕ್ ಲೇಡಿ ಎಸ್ಕೇಪ್!
ಶ್ರೀನಗರ , ಸೋಮವಾರ, 17 ಜುಲೈ 2023 (07:59 IST)
ಶ್ರೀನಗರ : ಮಹಿಳೆಯೊಬ್ಬಳು ಬರೋಬ್ಬರಿ 27 ಯುವಕರನ್ನು ಮದುವೆಯಾಗಿ ವಂಚಿಸಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ. ವಂಚಿತರ ಪೈಕಿ 12 ಮಂದಿ ತಮ್ಮ ಪತ್ನಿ ನಾಪತ್ತೆಯಾಗಿದ್ದಾಳೆಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರು ನೀಡಿದ ಫೋಟೋಗಳನ್ನು ನೋಡಿ ಪೊಲೀಸರೇ ದಂಗಾಗಿದ್ದಾರೆ.

ಈ ಖತರ್ನಾಕ್ ಲೇಡಿ, 2015 ರಲ್ಲಿ ಬಿಡುಗಡೆಯಾದ ‘ಡಾಲಿ ಕಿ ಡೋಲಿ’ ಸಿನಿಮಾದಿಂದ ಸ್ಫೂರ್ತಿಯಾಗಿ ಯುವಕರನ್ನು ವಂಚಿಸಿದ್ದಾಳೆ. ಮಹಿಳೆ ಶ್ರೀಮಂತ ವ್ಯಕ್ತಿಗಳನ್ನು ಮದುವೆಯಾಗುತ್ತಾಳೆ. ಹುಡುಗನ ಕುಟುಂಬಗಳಿಂದ ನಗದು ಮತ್ತು ಆಭರಣಗಳನ್ನು ಲೂಟಿ ಮಾಡಿ ಪರಾರಿಯಾಗುತ್ತಾಳೆ. ಇದು ಸಿನಿಮಾದ ಸ್ಟೋರಿ. ಅದರಿಂದ ಸ್ಫೂರ್ತಿಯಾಗಿ ಕಾಶ್ಮೀರದ ಮಹಿಳೆ ಕೂಡ 27 ಯುವಕರನ್ನು ವಂಚಿಸಿದ್ದಾರೆ.

ಮಹಿಳೆ ಬದ್ಗಾಮ್ ಜಿಲ್ಲೆಯಲ್ಲಿಯೇ 27 ಮಂದಿಯನ್ನು ಮದುವೆಯಾಗಿದ್ದು, 12 ಮಂದಿ ಮಾತ್ರ ಪೊಲೀಸರನ್ನು ಸಂಪರ್ಕಿಸಿದ್ದಾರೆ. ವಂಚನೆಗೊಳಗಾದವರ ಪೈಕಿ ಯುವಕನೊಬ್ಬನ ತಂದೆ, ಪೊಲೀಸರಿಗೆ ದೂರು ನೀಡಿದ್ದಾರೆ. ದೈಹಿಕ ಅನಾರೋಗ್ಯದ ಕಾರಣ ನನ್ನ ಮಗನಿಗೆ ಮದುವೆ ಮಾಡಲು ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಮಧ್ಯವರ್ತಿಯೊಬ್ಬರು ನಮ್ಮ ಬಳಿಗೆ ಬಂದು 2 ಲಕ್ಷ ರೂ. ನೀಡಿದರೆ, ವಧುವನ್ನು ಮದುವೆಗೆ ಹೊಂದಿಸುವುದಾಗಿ ಹೇಳಿದ್ದ. ಇದಕ್ಕೆ ಒಪ್ಪಿ ಆತನೊಂದಿಗೆ ಒಪ್ಪಂದ ಮಾಡಿಕೊಂಡು ಮದುವೆಗೆ ಮುಂದಾದೆವು ಎಂದು ತಿಳಿಸಿದ್ದಾರೆ.

ಮದುವೆಯ ಸಮಯದಲ್ಲಿ ವಧುವಿಗೆ 3.80 ಲಕ್ಷ ರೂ. ನಗದು ಮತ್ತು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ಮೆಹರ್ ಆಗಿ ನೀಡಲಾಯಿತು. ಮದುವೆಯಾದ ಕೆಲ ದಿನಗಳ ನಂತರ ಆಸ್ಪತ್ರೆಗೆ ಹೋಗುವುದಾಗಿ ಅತ್ತೆಯಂದಿರಿಂದ ಅನುಮತಿ ಪಡೆದ ವಧು ವಾಪಸ್ ಬರಲೇ ಇಲ್ಲ ಎಂದು ದೂರಿದ್ದಾರೆ. ಬಹುತೇಕ ಎಲ್ಲಾ ಸಂತ್ರಸ್ತರ ಅನುಭವವೂ ಇದೇ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.   

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ 2 ದಿನ ವಿಪಕ್ಷಗಳ ಒಕ್ಕೂಟ ಸಭೆ