Select Your Language

Notifications

webdunia
webdunia
webdunia
webdunia

ಅಮರನಾಥ ಯಾತ್ರಿಕರಿಗೆ ಗುಡ್ ನ್ಯೂಸ್ : ಹೆಲಿಕಾಪ್ಟರ್ ಸೌಲಭ್ಯವೂ ಲಭ್ಯ

ಅಮರನಾಥ  ಯಾತ್ರಿಕರಿಗೆ ಗುಡ್ ನ್ಯೂಸ್ : ಹೆಲಿಕಾಪ್ಟರ್ ಸೌಲಭ್ಯವೂ ಲಭ್ಯ
ಶ್ರೀನಗರ , ಸೋಮವಾರ, 10 ಜುಲೈ 2023 (10:22 IST)
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆಯ ಪ್ರಮಾಣ ತಗ್ಗಿ, ಹವಾಮಾನ ಪರಿಸ್ಥಿತಿ ಸುಧಾರಿಸಿದ್ದು ಈ ಹಿನ್ನೆಲೆ ಬಾಲ್ಟಾಲ್ ಬೇಸ್ನಿಂದ ಮತ್ತೆ ಅಮರನಾಥ ಯಾತ್ರೆ ಪುನರಾರಂಭಗೊಳಿಸಲಾಗಿದೆ.

ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಮಧ್ಯಾಹ್ನದಿಂದ ಪಹಲ್ಗಾಮ್ ಬೇಸ್ನಿಂದ ಯಾತ್ರೆಯನ್ನು ಪುನರಾರಂಭ ಮಾಡಲಾಗಿತ್ತು. ಹವಾಮಾನ ಪರಿಸ್ಥಿತಿ ಸೂಕ್ತವಾಗಿದ್ದ ಹಿನ್ನೆಲೆ 6491 ಮಂದಿ ಯಾತ್ರಾರ್ಥಿಗಳು ಪವಿತ್ರ ಗುಹೆಯ ದರ್ಶನ ಪಡೆದರು. ಈಗ ಬಾಲ್ಟಾಲ್ ಭಾಗದಲ್ಲೂ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

116 ಸಾಧುಗಳು, 6 ಸಾದ್ವಿಗಳು ಸೇರಿ ಈವರೆಗೂ 93,929 ಯಾತ್ರಾರ್ಥಿಗಳು ಪವಿತ್ರ ಗುಹೆಯ ದರ್ಶನ ಪಡೆದಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಿರಿಯ ಅಧಿಕಾರಿಗಳು ಮತ್ತು ಅಮರನಾಥ ಯಾತ್ರಾ ಆಡಳಿತ ಮಂಡಳಿಯ ಜೊತೆಗೆ ಸಭೆ ನಡೆಸಿದ್ದು, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮತ್ತು ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಚರ್ಚಿಸಿದ್ದಾರೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ‘ಅನ್ನಭಾಗ್ಯ’ಯೋಜನೆ ಫಲಾನುಭವಿಗಳ ಖಾತೆಗೆ ಹಣ