Select Your Language

Notifications

webdunia
webdunia
webdunia
webdunia

ದುರಂತ : ಅಪಾಚಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ದುರಂತ : ಅಪಾಚಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ಭೋಪಾಲ್ , ಮಂಗಳವಾರ, 30 ಮೇ 2023 (13:16 IST)
ಭೋಪಾಲ್ : ಭಾರತೀಯ ವಾಯುಪಡೆಯ ಅಪಾಚಿ ಹೆಲಿಕಾಪ್ಟರ್ ಸೋಮವಾರ ಮಧ್ಯಪ್ರದೇಶದ ಭಿಂಡ್ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
 
ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಮುನ್ನೆಚ್ಚರಿಕೆಯಾಗಿ ಪೈಲಟ್ ಲ್ಯಾಂಡಿಂಗ್ ಮಾಡಿದ್ದಾರೆ. ಪೈಲಟ್ ಸಮಯಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ ಎಂದು ತಿಳಿಸಿರುವ ಅಧಿಕಾರಿಗಳು ಶೀಘ್ರದಲ್ಲೇ ಹೆಲಿಕಾಪ್ಟರ್ ಹಾರಾಟಕ್ಕೆ ಸಿದ್ಧವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. 

IAFನ ಅಪಾಚಿ AH-64 ಹೆಲಿಕಾಪ್ಟರ್ ಎಂದಿನಂತೆ ಕಾರ್ಯಾಚರಣೆ ತರಬೇತಿ ಸಮಯದಲ್ಲಿ ಭಿಂಡ್ ಬಳಿ ತುರ್ತು ಭೂಸ್ಪರ್ಶ ಮಾಡಿತು. ಹೆಲಿಕಾಪ್ಟರ್ ಹಾಗೂ ಅದರಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿದ್ದು, ತಾಂತ್ರಿಕ ತಂಡ ಸ್ಥಳಕ್ಕೆ ತಲುಪಿದೆ ವಾಯುಪಡೆ ಟ್ವೀಟ್ ಮೂಲಕ ತಿಳಿಸಿದೆ.   

Share this Story:

Follow Webdunia kannada

ಮುಂದಿನ ಸುದ್ದಿ

ಕರೆಂಟ್ ಬಿಲ್ ಕೇಳಲು ಬಂದ್ರೆ ನನ್ನನ್ನು ಕರೆಯಿರಿ : ಸುರೇಶ್ ಗೌಡ