Publish Date: Tue, 30 May 2023 (12:25 IST)
Updated Date: Tue, 30 May 2023 (12:31 IST)
ಮಂಡ್ಯ : ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಡೈಲಾಗ್ ಹೇಳಿ ಕಾಂಗ್ರೆಸ್ನ ಗ್ಯಾರಂಟಿಗಳ ಬಗ್ಗೆ ಮಂಡ್ಯ ಜಿಲ್ಲೆ ನಾಗಮಂಗಲದ ಜೆಡಿಎಸ್ ಮಾಜಿ ಶಾಸಕ ಸುರೇಶ್ಗೌಡ ಕುಟುಕಿದ್ದಾರೆ.
ನಾಗಮಂಗದಲ್ಲಿ ಮತದಾರರಿಗೆ ಧನ್ಯವಾದ ಹೇಳಲು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಭರವಸೆಗಳನ್ನು ಲೇವಡಿ ಮಾಡಿದ್ದಾರೆ. ಇವತ್ತು ಸುಳ್ಳು ಭರವಸೆ ಮೂಲಕ ಸರ್ಕಾರ ಬಂದಿದೆ. ಯಾರೂ ಕರೆಂಟ್ ಬಿಲ್ ಕಟ್ಟಬೇಡಿ, ಕರೆಂಟ್ ಬಿಲ್ ಕೇಳಲು ಬಂದರೆ ನನ್ನನ್ನು ಕರೆಯಿರಿ.
ನಾನು ಬರ್ತೀನಿ. ಮಹಿಳೆಯರಿಗೆ ಫ್ರೀ ಬಸ್, ಬಸ್ ಹತ್ತಿ ಕುಳಿತುಕೊಳ್ಳಿ. ಯಾರೂ ಬಸ್ ಟಿಕೆಟ್ ತೆಗೆದುಕೊಳ್ಳಬೇಡಿ. ನಂಗೂ ಫ್ರೀ, ನಿನಗೂ ಫ್ರೀ, ಮಹದೇವಪ್ಪನಿಗೂ ಫ್ರೀ, ಉಚಿತ, ಖಚಿತ, ನಿಶ್ಚಿತ ಎಂದು ಟೀಕೆ ಮಾಡಿದರು.