Publish Date: Sat, 11 Mar 2023 (13:58 IST)
Updated Date: Sat, 11 Mar 2023 (14:46 IST)
ತುಮಕೂರು : ಇಲ್ಲಿನ ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ದೇವಸ್ಥಾನಗಳ ಹಣವನ್ನೂ ಬಿಡದೇ ಕಮಿಷನ್ ಪಡೆಯುತಿದ್ದಾರೆ. ಅಷ್ಟರ ಮಟ್ಟಿಗೆ ಕ್ಷೇತ್ರದಲ್ಲಿ ಕಮಿಷನ್ ದಂಧೆ ನಡೆಸುತಿದ್ದಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಗಂಭೀರ ಆರೋಪ ಮಾಡಿದ್ದಾರೆ.
ಊರ್ಡಿಗೆರೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಅವರು ಮಾತನಾಡಿದರು. ಊರ್ಡಿಗೆರೆ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದ ಕಾಮಗಾರಿಗೆ ಕಮಿಷನ್ ಕೊಟ್ಟಿಲ್ಲ ಎಂದು ಕಾಮಗಾರಿಯನ್ನೇ ಪೂರ್ಣಗೊಳಿಸಿಲ್ಲ ಎಂದು ಆಪಾದಿಸಿದ್ದಾರೆ.
ಬಯಲು ಆಂಜನೇಯ ಸ್ವಾಮಿ ದೇವರಿಗೆ ನನ್ನ ಕಾಲದಲ್ಲಿ 50 ಲಕ್ಷ ಬಿಡುಗಡೆ ಮಾಡಿದ್ದೆ. ಸೋತ ನಂತರವೂ 25ಲಕ್ಷ ಹಣ ಕೊಡಸಿದ್ದೆ. ಆದರೆ ಶಾಸಕರು 5 ಪೈಸೆ ಖರ್ಚು ಮಾಡಿಲ್ಲ ಕಮಿಷನ್ ಕೊಟ್ಟಿಲ್ಲ ಎಂದು ಮೂರು ವರ್ಷದಿಂದ ಆ ಹಣವನ್ನು ಹಾಗೆ ಇಟ್ಟುಕೊಂಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
Ramya kosira
Publish Date: Sat, 11 Mar 2023 (13:58 IST)
Updated Date: Sat, 11 Mar 2023 (14:46 IST)