Publish Date: Tue, 10 Nov 2020 (12:42 IST)
Updated Date: Tue, 10 Nov 2020 (12:43 IST)
ಕೋಲ್ಕತ್ತಾ : ತಡರಾತ್ರಿ ಕ್ಯಾಬ್ ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಪ್ರಯಾಣಿಕರು ಚಾಲಕನಿಗೆ ಬಂದೂಕ ತೋರಿಸಿ ಹೆದರಿಸಿ ಚಾಲಕನಿಂದ ವಸ್ತುಗಳನ್ನು ದೋಚಿ ಆತನನ್ನು ಹೊರಗೆ ತಳ್ಳಿ ಕಾರ್ ನ್ನು ತೆಗೆದುಕೊಂಡು ಹೋದ ಘಟನೆ ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್ ನಲ್ಲಿ ನಡೆದಿದೆ.
ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಚಾಲಕನಿಗೆ ಎಚ್ಚರಗೊಂಡು ಇಬ್ಬರು ಸ್ಥಳಿಯರ ಸಹಾಯ ಕೇಳಿದ್ದಾನೆ. ಅವರ ಜೊತೆ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾನೆ. ಬಳಿಕ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.