Publish Date: Tue, 10 Nov 2020 (12:40 IST)
Updated Date: Tue, 10 Nov 2020 (12:41 IST)
ಪಾಟ್ನಾ : ಪತಿಯ ನಿಂದನೆ ಮತ್ತು ಹಲ್ಲೆಯಿಂದ ಬೇಸತ್ತ ಮಹಿಳೆಯೊಬ್ಬಳು ಪತಿಯನ್ನು ಕೊಲೆ ಮಾಡಿದ ಘಟನೆ ಲಖಿಸರೈ ಜಿಲ್ಲೆಯ ಕಿಶನ್ಪುರ್ ಗ್ರಾಮದಲ್ಲಿ ನಡೆದಿದೆ.
ಸಂಜಯ್ ಪಟೇಲ್ ಮೃತಪಟ್ಟ ಪತಿ. ಈತ ಕಂಠಪೂರ್ತಿ ಕುಡಿದು ಮನೆಗೆ ಬಂದು ಮಹಿಳೆಗೆ ಹಿಂಸೆ ಕೊಡುತ್ತಿದ್ದನು ಇದರಿಂದ ಬೇಸತ್ತ ಮಹಿಳೆ ಆತನ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಮನೆಯಲ್ಲಿ ಅಡಗಿಸಿಟ್ಟಿದ್ದಾಳೆ. ಸಂಜಯ್ ವಿರುದ್ಧ ಕೇಸೊಂದು ದಾಖಲಾದ ಹಿನ್ನಲೆಯಲ್ಲಿ ಪೊಲೀಸರು ಆತನನ್ನು ಹುಡುಕಾಡುತ್ತಿದ್ದಾಗ ಆತ ಮೃತಪಟ್ಟ ವಿಚಾರ ತಿಳಿದುಬಂದಿದೆ.
ತಕ್ಷಣ ಅವರು ಪತ್ನಿಯ ವಿಚಾರಣೆ ಮಾಡಿದಾಗ ಆಕೆ ತಾನೇ ಕೊಲೆ ಮಾಡಿರುವುದಾಗಿ ತಿಳಿಸಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿ ಮಹಿಳೆಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ ಎನ್ನಲಾಗಿದೆ.