Select Your Language

Notifications

webdunia
webdunia
webdunia
Thursday, 10 April 2025
webdunia

ಪ್ರಿ ವೆಡ್ಡಿಂಗ್ ಶೂಟಿಂಗ್ ವೇಳೆ ದುರ್ಮರಣಕ್ಕೀಡಾದ ನವಜೋಡಿ

ಅಪರಾಧ ಸುದ್ದಿಗಳು
ಮೈಸೂರು , ಮಂಗಳವಾರ, 10 ನವೆಂಬರ್ 2020 (11:40 IST)
ಮೈಸೂರು: ಇತ್ತೀಚೆಗಿನ ದಿನಗಳಲ್ಲಿ ಪ್ರಿವೆಡ್ಡಿಂಗ್ ಶೂಟ್ ಅನ್ನು ವಿಶೇಷವಾಗಿ ಮಾಡಲು ಏನೇನೋ ಸಾಹಸ ಮಾಡಲಾಗುತ್ತಿದೆ. ಹೀಗೇ ಮಾಡಲು ಹೋದ ನವ ಜೋಡಿಯೊಂದು ಜೀವ ಕಳೆದುಕೊಂಡ ಘಟನೆ ತಿ.ನರಸೀಪುರದಲ್ಲಿ ನಡೆದಿದೆ.


ವರ ಚಂದ್ರು (30) ಮತ್ತು ವಧು ಶಶಿಕಲಾ (20) ಮೃತಪಟ್ಟವರು. ಕಾವೇರಿ ನದಿಯಲ್ಲಿ ನಿನ್ನೆ ಪ್ರಿ ವೆಡ್ಡಿಂಗ್ ಶೂಟ್ ನಡೆಸಲು ಈ ಜೋಡಿ ಫೋಟೋಗ್ರಾಫರ್ ಜತೆಗೆ ತೆಪ್ಪವೇರಿತ್ತು. ಮುಡುಕುತೊರೆ ನದಿ ಪಾತ್ರದಲ್ಲಿ ತೆಪ್ಪದಲ್ಲಿ ಎದ್ದು ನಿಂತು ಫೋಟೋಗೆ ಪೋಸ್ ಕೊಡುವ ವೇಳೆಗೆ ಸಮತೋಲನ ತಪ್ಪಿ ತೆಪ್ಪ ಆಯ ಮಗುಚಿದೆ. ತೆಪ್ಪ ನಡೆಸುತ್ತಿದ್ದಾಗ ಜೋಡಿಯನ್ನು ಕಾಪಾಡುವ ಪ್ರಯತ್ನವೂ ಮಾಡದೇ ಈಜಿ ತಲೆಮರೆಸಿಕೊಂಡಿದ್ದಾನೆ. ಬಳಿಕ ಅಗ್ನಿಶಾಮಕ ದಳದವರು ನವಜೋಡಿಯ ಮೃತದೇಹಗಳನ್ನು ಹೊರತೆಗೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಕೇಸ್: ಆದಿತ್ಯಾ ಆಳ್ವಾ ವಿರುದ್ಧ ಲುಕ್ ಔಟ್ ನೋಟಿಸ್