ಗುಜರಾತ್: ವಿಶ್ವ ವನ್ಯಜೀವಿ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೆಳಗ್ಗೆ ಗುಜರಾತ್‌ನ ಜುನಾಗಢ್‌ನ ಗಿರ್ ವನ್ಯಜೀವಿ ಅಭಯಾರಣ್ಯದಲ್ಲಿ ಸಿಂಹ ಸಫಾರಿಗೆ ತೆರಳಿದರು. ಜೀಪ್ ಸಫಾರಿ ವೇಳೆ ಕೆಲವು ಸಚಿವರು ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಜೊತೆಗಿದ್ದು, ಮೋದಿ ಅವರು ಸಿಂಹಗಳ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದ ದೃಶ್ಯವೂ ಕಂಡುಬಂತು.
ನಂತರ ಅವರು ತಮ್ಮ ಭೇಟಿಯ ಚಿತ್ರಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
"ಇಂದು ಬೆಳಿಗ್ಗೆ, ವಿಶ್ವ ವನ್ಯಜೀವಿ ದಿನದಂದು, ನಾನು ಗಿರ್‌ನಲ್ಲಿ ಸಫಾರಿಗೆ ಹೋಗಿದ್ದೆ, ಅದು ನಮಗೆಲ್ಲರಿಗೂ ತಿಳಿದಿರುವಂತೆ, ಭವ್ಯವಾದ ಏಷ್ಯಾಟಿಕ್ ಸಿಂಹದ ತವರೂರು. ಗಿರ್‌ಗೆ ಬರುವುದರಿಂದ ನಾನು ಗುಜರಾತ್ ಸಿಎಂ ಆಗಿ ಸೇವೆ ಸಲ್ಲಿಸಿದಾಗ ನಾವು ಒಟ್ಟಾಗಿ ಮಾಡಿದ ಕೆಲಸದ ಅನೇಕ ನೆನಪುಗಳನ್ನು ಮರುಕಳಿಸುತ್ತದೆ" ಎಂದು ಅವರು ಹೇಳಿದರು.